ADVERTISEMENT

ನಾರಾಯಣ ಗುರುಗಳ 169ನೇ ಜಯಂತ್ಯುತ್ಸವ, ಕನ್ಯಾಡಿ ಶ್ರೀಗೆ ಗುರುವಂದನೆ ಡಿ.3ಕ್ಕೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2023, 1:01 IST
Last Updated 2 ಡಿಸೆಂಬರ್ 2023, 1:01 IST
<div class="paragraphs"><p>ನಾರಾಯಣ ಗುರು</p></div>

ನಾರಾಯಣ ಗುರು

   

ಬೆಂಗಳೂರು: ಸಾಮಾಜಿಕ ಕ್ರಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜಯಂತ್ಯುತ್ಸವ ಮತ್ತು ಧರ್ಮಸ್ಥಳ ಕನ್ಯಾಡಿ ರಾಮಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗೆ ಗುರುವಂದನ ಕಾರ್ಯಕ್ರಮ ಡಿ.3ಕ್ಕೆ ಹಮ್ಮಿಕೊಳ್ಳಲಾಗಿದೆ.

ನಗರದ ಡಾ. ರಾಜಕುಮಾರ್‌ ಆಡಿಟೋರಿಯಂನಲ್ಲಿ ಗೆಳೆಯರ ಬಳಗ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಗಣ್ಯರು ಗುರುವಂದನೆ ನೆರವೇರಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕರಾದ ವಿ. ಗಂಗಾಧರಪ್ಪ, ಎಚ್.ಎಸ್‌. ಶ್ರೀವತ್ಸ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಆತ್ಮಾನಂದ ಸ್ವಾಮೀಜಿಯವರ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿದ್ದಾರೆ. ಸಂಘಟನೆಯಿಂದ ಒಂದಾಗಿ ಶಿಕ್ಷಣದಿಂದ ಸಬಲರಾಗಿ ಎಂಬ ನಾರಾಯಣ ಗುರುಗಳ ತತ್ವಕ್ಕೆ ಬದ್ಧರಾಗಿ ಕೆಲಸ ಮಾಡುತ್ತಿದ್ದಾರೆ. ಉಡುಪಿಯ ಬಾರ್ಕೂರಿನಲ್ಲಿ 15 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಮಾದರಿಯ ಐಟಿಐ ನಿರ್ಮಿಸಿ 100 ಮಕ್ಕಳಿಗೆ ವಸತಿ ಸಹಿತ ಉಚಿತ ಶಿಕ್ಷಣ ನೀಡುವ ಕಾರ್ಯ ನಡೆಯುತ್ತಿದೆ ಎಂದು ಸಮಾಜದ ಮುಖಂಡ ಎಚ್. ರಾಜು ಪೂಜಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.