ADVERTISEMENT

ಯಶಸ್ವಿಯಾದ ಅವಳಿ ಕೈಗಳ ಕಸಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:21 IST
Last Updated 19 ನವೆಂಬರ್ 2018, 20:21 IST

ಬೆಂಗಳೂರು: ಮೊದಲ ಬಾರಿಗೆ ನಗರದ ನಾರಾಯಣ ಹೆಲ್ತ್ ಸಿಟಿ ವೈದ್ಯರು ಯಶಸ್ವಿಯಾಗಿ ಅವಳಿ ಕೈಗಳನ್ನು ಕಸಿ ಮಾಡಿದ್ದಾರೆ.

ಪುದುಚೇರಿಯ ಜೆಐಪಿಎಂಇಆರ್‌ ಸಂಸ್ಥೆಯ ಜೊತೆಗೂಡಿ ಕೈಗಳನ್ನು ಜೋಡಿಸುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದೆ. ಚಿಲ್ಲರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಆನೇಕಲ್‌ನ ಯುವಕನ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಭಾನುವಾರ ಘೋಷಿಸಿದ್ದರು. ಪೋಷಕರ ಒಪ್ಪಿಗೆ ಪಡೆದು ಯುವಕನ, ಹೃದಯದ ಕವಾಟಗಳು, ಶ್ವಾಸಕೋಶ, ಯಕೃತ್‌, ಮೂತ್ರಪಿಂಡ, ಕಣ್ಣ ಮತ್ತು ಕೈಗಳನ್ನು ದಾನ ಪಡೆದುಕೊಳ್ಳಲಾಗಿದೆ.

18 ವರ್ಷದ ಬಾಲಕಿಗೆ ಹೃದಯ ಕಸಿ ಮಾಡಲಾಗಿದೆ. 67 ವರ್ಷದ ವೃದ್ಧರೊಬ್ಬರಿಗೆ ಯಕೃತ್‌, ತಮಿಳುನಾಡಿನ 31 ವರ್ಷದ ವ್ಯಕ್ತಿಗೆ ಕೈಗಳನ್ನು ದಾನ ಮಾಡಲಾಗಿದೆ.

ADVERTISEMENT

‘ಕೆಲಸದ ವೇಳೆ ಯಂತ್ರದಲ್ಲಿ ಸಿಕ್ಕಿದ್ದ ಯುವಕನ ಕೈಗಳು ಜಜ್ಜಿಹೋಗಿದ್ದವು. ಆದ್ದರಿಂದ ಕಸಿ ಮಾಡಿ ಜೋಡಿಸಲಾಗಿದೆ’ ಎಂದು ಡಾ. ಸಂಜಯ್‌ ಕುಮಾರ್ ಗೋಜಾ ನೇತೃತ್ವದ ವೈದ್ಯರ ತಂಡ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.