ADVERTISEMENT

ಸಾಂಸ್ಕೃತಿಕ ನೀತಿ ಜಾರಿಗೆ ನಾಟಕ ಅಕಾಡೆಮಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಮೇ 2019, 19:29 IST
Last Updated 10 ಮೇ 2019, 19:29 IST

ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅವರು ಸಿದ್ಧಪಡಿಸಿರುವ ಸಾಂಸ್ಕೃತಿಕ ನೀತಿಯ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ನಾಟಕ ಅಕಾಡೆಮಿಯು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರಿಗೆ ಪತ್ರ ಬರೆದಿದೆ.

ರಾಮಚಂದ್ರಪ್ಪ ವರದಿ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆಯಾಗಿದ್ದು, ಅಂದು ಸಚಿವರಾಗಿದ್ದ ಎಚ್.ಕೆ.ಪಾಟೀಲ ಅಧ್ಯಕ್ಷತೆಯ ಸಂಪುಟ ಉಪಸಮಿತಿ ಕೂಡ ಕೂಲಂಕುಷವಾಗಿ ಪರಿಶೀಲಿಸಿ ವರದಿ ಸಲ್ಲಿಸಿದೆ. ಇದನ್ನು ಆಧರಿಸಿ ಸರ್ಕಾರ 2017ರ ಅಕ್ಟೋಬರ್ 10ರಂದು ವರದಿ ಜಾರಿಗೆ ಆದೇಶ ನೀಡಿದೆ.

ಆರ್ಥಿಕ ಇಲಾಖೆ ಅನುಮೋದನೆಯೂ ದೊರೆತಿದೆ.ಬರಗೂರು ರಾಮಚಂದ್ರಪ್ಪ ಅವರು ಹಲವು ಬಾರಿ ನೆನಪಿನೋಲೆ ಬರೆದಿದ್ದಾರೆ. ಆದರೂ, ವರದಿ ಜಾರಿಗೆ ಅಧಿಕಾರಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ ಎಂದು ಅಕಾಡೆಮಿ ಅಧ್ಯಕ್ಷ ಜಿ.ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.