ADVERTISEMENT

ಗ್ರಾಹಕರಿಗೆ ಗುಣಮಟ್ಟದ ಹಾಲು ನೀಡಿ

ಸಂಸ್ಥೆಯ ಸಹಾಯ ಪಡೆಯಿರಿ: ರೈತರಿಗೆ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 18:14 IST
Last Updated 26 ನವೆಂಬರ್ 2019, 18:14 IST
‘ರಾಷ್ಟ್ರೀಯ ಕ್ಷೀರ ದಿನ’ದ ಅಂಗವಾಗಿ ಕೆಎಂಎಫ್‌ ವತಿಯಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ವಿತರಿಸಲಾಯಿತು. ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಇದ್ದರು.
‘ರಾಷ್ಟ್ರೀಯ ಕ್ಷೀರ ದಿನ’ದ ಅಂಗವಾಗಿ ಕೆಎಂಎಫ್‌ ವತಿಯಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ವಿತರಿಸಲಾಯಿತು. ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌ ಇದ್ದರು.   

ಬೆಂಗಳೂರು: ‘ಗ್ರಾಹಕರಿಗೆ ಗುಣಮಟ್ಟದ ಹಾಲು ಪೂರೈಸಲು ನಮ್ಮ ಸಂಸ್ಥೆ ಸುಧಾರಿತ ಕ್ರಮಗಳನ್ನು ಅನುಸರಿಸಿದೆ. ತಂತ್ರಜ್ಞಾನ ಆಧರಿತ ಹೈನುಗಾರಿಕೆ ವಿಧಾನ ಅನುಸರಿಸುವುದರಿಂದ ರೈತರು ಹೆಚ್ಚಿನ ಲಾಭ ಪಡೆಯಬಹುದು. ಇದಕ್ಕಾಗಿ ಸಂಸ್ಥೆಯ ಸಹಕಾರ ಪಡೆಯಬಹುದು’ ಎಂದು ಕೆಎಂಎಫ್‌ ವ್ಯವಸ್ಥಾ‍ಪಕ ನಿರ್ದೇಶಕ ಬಿ.ಸಿ.ಸತೀಶ್‌ ಹೇಳಿದರು.

ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್)ಹಾಗೂರಾಷ್ಟ್ರೀಯ ಪಶು ಪೋಷಣೆ ಮತ್ತು ಶಾರೀರಿಕ ವಿಜ್ಞಾನ ಸಂಸ್ಥೆ (ಎನ್ಐಎಎನ್‌ಪಿ), ಭಾರತೀಯ ಡೇರಿ ಸಂಘ ಹಾಗೂ ಕೆಎಂಎಫ್‌ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಕ್ಷೀರ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎನ್ಐಎಎನ್‌ಪಿ ನಿರ್ದೇಶಕ ರಾಘವೇಂದ್ರ ಭಟ್ಟ, ‘ಹೈನುಗಾರಿಕೆ ವಿಧಾನಗಳ ಬಗ್ಗೆ ನಮ್ಮ ಸಂಸ್ಥೆಯ ವತಿ
ಯಿಂದ ಹಲವು ಸಂಶೋಧನೆಗಳು ನಡೆದಿವೆ. ರೈತರು ಅವುಗಳ ಪ್ರಯೋಜನ ಪಡೆಯಬೇಕು’ ಎಂದು ತಿಳಿಸಿದರು.

ADVERTISEMENT

‘ರಾಜ್ಯದ ವಿವಿಧ ಜಿಲ್ಲೆಗಳ 15 ಡೇರಿಗಳ ವ್ಯಾಪ್ತಿಯ ರೈತರಿಗೆ ಹೈನುಗಾರಿಕೆ ಜ್ಞಾನ ಹೆಚ್ಚಿಸಲು ಗೋಷ್ಠಿ ಹಮ್ಮಿಕೊಳ್ಳಲಾಗಿದೆ’ ಎಂದುಭಾರತೀಯ ಡೇರಿ ಸಂಘದ ದಕ್ಷಿಣ ವಲಯದ ಕಾರ್ಯದರ್ಶಿ ಎನ್‌.ಕೆ.ಎಸ್‌.ಗೌಡ ವಿವರಿಸಿದರು.

ಬಿ.ಸಿ.ಸತೀಶ್‌, ಸ್ಮರಣ ಸಂಚಿಕೆ ಹಾಗೂ ತಾಂತ್ರಿಕ ಕೈಪಿಡಿ ಬಿಡುಗಡೆಗೊಳಿಸಿದರು. ಪ್ರಗತಿಪರ ಹೈನುಗಾರಿಕೆ ಮಾಡುವ ರೈತರಿಗೆ ಗುಣಮಟ್ಟದ ಹಾಲು ಉತ್ಪಾದನೆಗೆ ರೈತಸ್ನೇಹಿ ನವೀನ ತಂತ್ರಜ್ಞಾನಗಳ ಮಾಹಿತಿ ನೀಡುವ ‘ತಾಂತ್ರಿಕ ಗೋಷ್ಠಿ’ ಆಯೋಜಿಸಲಾಗಿತ್ತು.

ಐಡಿಎ ದಕ್ಷಿಣ ವಲಯದ ಅಧ್ಯಕ್ಷ ಸಿ.ಪಿ.ಚಾರ್ಲ್ಸ್‌, ಕಾರ್ಯಕಾರಿ ಸಮಿತಿ ಅಧ್ಯಕ್ಷ ಜಗನ್ನಾಥ್‌ ರಾವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.