ADVERTISEMENT

ನವಮಿ ಸಂಸ್ಥೆಯಿಂದ ಪರಿಸರಸ್ನೇಹಿ ಸಮುಚ್ಚಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 19:58 IST
Last Updated 4 ಮಾರ್ಚ್ 2019, 19:58 IST
ನವಮಿ ಗ್ರೂಪ್‌ನಿಂದ ನಿರ್ಮಿಸಲಾದ ವಸತಿ ಸಮುಚ್ಚಯ
ನವಮಿ ಗ್ರೂಪ್‌ನಿಂದ ನಿರ್ಮಿಸಲಾದ ವಸತಿ ಸಮುಚ್ಚಯ   

ಬೆಂಗಳೂರು: ಮೈಸೂರು ರಸ್ತೆಯ ಬೆಂಗಳೂರು ವಿಶ್ವವಿದ್ಯಾಲಯ ಮೆಟ್ರೊ ನಿಲ್ದಾಣಕ್ಕೆ ಹತ್ತಿರದಲ್ಲಿ ನವಮಿ ಸಂಸ್ಥೆ ಅತ್ಯಾಧುನಿಕ ಸೌಕರ್ಯ ಹೊಂದಿದ, ವಸತಿ ಸಮುಚ್ಚಯಗಳನ್ನು ನಿರ್ಮಿಸುತ್ತಿದೆ.

‘ಜಿ ಪ್ಲಸ್‌ 30’ ಮಹಡಿಗಳ ನಾಲ್ಕು ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದ್ದು, ಅವುಗಳು ಸಂಪೂರ್ಣ ಪರಿಸರ ಸ್ನೇಹಿಯಾಗಿರಲಿವೆ. ಮನುಷ್ಯನಿಗೆ ನಿಸರ್ಗ ಸಹಜ ಪರಿಸರದ ಅನುಭವ ನೀಡುವ ಉದ್ದೇಶವನ್ನು ಹೊಂದಲಾಗಿದೆ. ವಾಸ್ತುಶಿಲ್ಪಿಅನೋಜ್ಟೆ ವೇಟಿಯಾ ಅವರ ಮಾರ್ಗದರ್ಶನದಲ್ಲಿ ಸಮುಚ್ಚಯಗಳನ್ನು ವಿನ್ಯಾಸಗೊಳಿಸ
ಲಾಗುತ್ತಿದೆ. ನಿರ್ಮಾಣದ ಪ್ರತಿ ಹಂತದಲ್ಲೂ ಹಿಂದೂ ವಾಸ್ತುಶಾಸ್ತ್ರವನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತಿದೆ.

ಬಾಲ್ಕನಿಗಳನ್ನು ಸಾಂಪ್ರದಾಯಿಕ ಮಾದರಿಯಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ಬಾಲ್ಕನಿಯಲ್ಲಿಕುಳಿತುಕೊಳ್ಳಲು ಸಾಕಷ್ಟು ಜಾಗ ಬಿಡಲಾಗುತ್ತಿದೆ.

ADVERTISEMENT

ಸಮುದಾಯದವರೊಟ್ಟಿಗೆ ಹಬ್ಬಗಳನ್ನು ಆಚರಿಸುವ ಕನಸನ್ನು ಹೊಂದಿದವರಿಗೆ ಸಾಕಷ್ಟು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ವಿಹಾರಕ್ಕೆ ಉದ್ಯಾನ ನಿರ್ಮಿಸಲಾಗುತ್ತಿದೆ.

ಸ್ಕೈ ಕ್ಲಬ್‌, ಟೆರೆಸ್ ಲಾಂಜ್‌, ಹೆಲ್ತ್‌ ಕ್ಲಬ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿಶ್ವವಿದ್ಯಾಲಯದ ಅರಣ್ಯ ಪ್ರದೇಶದ ಹಿನ್ನೆಲೆಯಲ್ಲಿ ಈ ಸಮುಚ್ಚಯ ಇರಲಿದ್ದು, ಪ್ರಾಕೃತಿಕ ಸೊಬಗನ್ನು ಆನಂದಿಸಬಹುದು ಎಂದು ನವಮಿ ಗ್ರೂಪ್‌ನ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.