ADVERTISEMENT

ಆತಂಕಕಾರಿ: ಬೆಂಗಳೂರಲ್ಲಿ ಆಗಸ್ಟ್‌ನ ಮೊದಲ 10 ದಿನಗಳಲ್ಲಿ 499 ಮಕ್ಕಳಿಗೆ ಕೋವಿಡ್

ಐಎಎನ್ಎಸ್
Published 12 ಆಗಸ್ಟ್ 2021, 8:31 IST
Last Updated 12 ಆಗಸ್ಟ್ 2021, 8:31 IST
ಪ್ರಾತಿನಿಧಿಕ: ಪಿಟಿಐ ಚಿತ್ರ
ಪ್ರಾತಿನಿಧಿಕ: ಪಿಟಿಐ ಚಿತ್ರ   

ಬೆಂಗಳೂರು: ನಗರದಲ್ಲಿ ಆಗಸ್ಟ್ ತಿಂಗಳಮೊದಲ ಹತ್ತು ದಿನಗಳಲ್ಲಿ 499 ಮಕ್ಕಳಲ್ಲಿ ಕೋವಿಡ್ -19 ದೃಢಪಟ್ಟಿದ್ದು, ಪೋಷಕರಲ್ಲಿ ಆತಂಕಕ್ಕೆ ಎಡೆಮಾಡಿದೆ ಎಂದು ಸುದ್ದಿ ಸಂಸ್ಥೆಐಎಎನ್‌ಎಸ್‌ ವರದಿ ಮಾಡಿದೆ.

ಹೆಲ್ತ್ ಬುಲೆಟಿನ್ ಪ್ರಕಾರ, 9 ವರ್ಷದೊಳಗಿನ ಸುಮಾರು 88 ಮಕ್ಕಳು ಮತ್ತು 10 ರಿಂದ 19 ವರ್ಷದೊಳಗಿನ 305 ಮಂದಿ ಕೊರೊನಾ ವೈರಸ್‌ ತಗುಲಿರುವುದು ದೃಢಪಟ್ಟಿದೆ.

499 ಪ್ರಕರಣಗಳ ಪೈಕಿ, ಕಳೆದ ಐದು ದಿನಗಳಲ್ಲಿ 263 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ 88 ಪ್ರಕರಣಗಳು 9 ವರ್ಷದೊಳಗಿನವರಾಗಿದ್ದರೆ, 175 ಪ್ರಕರಣ 10 ರಿಂದ 19 ವರ್ಷ ವಯಸ್ಸಿನವರಾಗಿದ್ದಾರೆ.

ADVERTISEMENT

ಆರೋಗ್ಯ ಇಲಾಖೆಯು ಈ ಬೆಳವಣಿಗೆಯನ್ನು ಆತಂಕಕಾರಿ ಸನ್ನಿವೇಶವೆಂದು ಪರಿಗಣಿಸಿದ್ದು, ಸೋಂಕು ಹರಡುವಿಕೆ ನಿಯಂತ್ರಿಸಲು ಈಗಾಗಲೇ ಕಠಿಣ ಕ್ರಮಗಳನ್ನು ಆರಂಭಿಸಿದೆ.

ಮುಂಬರುವ ಕೆಲವು ವಾರಗಳಲ್ಲಿ ಈ ಸಂಖ್ಯೆ ಮೂರು ಪಟ್ಟು ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆಯ ಮೂಲಗಳು ವಿವರಿಸುತ್ತವೆ.

ಪೋಷಕರಿಗೆ ತಾವು ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಸಲಹೆ ನೀಡಲಾಗಿದ್ದು, ಮಕ್ಕಳ ಬಗ್ಗೆ ಜಾಗ್ರತೆ ವಹಿಸುವಂತೆ ಸೂಚಿಸಲಾಗಿದೆ. ಜನದಟ್ಟಣೆಯ ಸ್ಥಳಗಳಿಂದ ಮಕ್ಕಳನ್ನು ದೂರ ಇಡುವಂತೆ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.