ADVERTISEMENT

ನೀಟ್: ಎಕ್ಸೆಲ್‌ ಕೇಂದ್ರದಿಂದ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 19:23 IST
Last Updated 11 ಜೂನ್ 2019, 19:23 IST

ಬೆಂಗಳೂರು:ನೀಟ್‌, ಜೆಇಇ ಸಿಇಟಿ, ಕಾಮೆಡ್‌–ಕೆ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಎಕ್ಸೆಲ್‌ ಅಕಾಡೆಮಿಕ್ಸ್‌ ಕೋಚಿಂಗ್‌ ಸಂಸ್ಥೆ ಈ ಸಾಲಿನ ತರಬೇತಿಯನ್ನು ಪ್ರಾರಂಭಿಸಿದೆ. ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ಐಐಟಿ ಪರೀಕ್ಷೆಗಳಲ್ಲಿ ಸಾಕಷ್ಟು ರ‍್ಯಾಂಕ್‌ಗಳನ್ನು ಈ ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿದ್ದಾರೆ.

ರಾಜ್ಯ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ಗುಜರಾತ್, ದೆಹಲಿ ಮುಂತಾದ ಕಡೆಗಳಿಂದ ವಿದ್ಯಾರ್ಥಿಗಳು ನಗರದಲ್ಲಿರುವ ಈ ಸಂಸ್ಥೆಗೆ ತರಬೇತಿಗೆ ಬರುತ್ತಾರೆ.

ನೀಟ್‌ ತಯಾರಿ ಜೊತೆಗೆ ಎಐಐಎಂಎಸ್‌ ಮತ್ತು ಜೆಐಪಿಎಂಇಆರ್ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ 280ರಿಂದ 300 ಪರೀಕ್ಷೆಗಳು ನಡೆಯುತ್ತವೆ. ಅಲ್ಲದೆ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಆನ್‌ಲೈನ್‌ ವ್ಯವಸ್ಥೆಯ ಗ್ರಂಥಾಲಯ ಸೌಲಭ್ಯ ಇದೆ. ದೂರದ ಊರು, ರಾಜ್ಯಗಳಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆ ಇದೆ ಎಂದು ಸಂಸ್ಥೆಯ ಡಾ. ಎಸ್.ವಿ. ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಸಂಸ್ಥೆಯಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ತರಬೇತಿ ನೀಡಲಾಗುತ್ತದೆ. ಪ್ರತಿನಿತ್ಯ 2 ಗಂಟೆ ಭೌತವಿಜ್ಞಾನ, 2 ಗಂಟೆ ರಸಾಯನವಿಜ್ಞಾನ, 2 ಗಂಟೆ ಜೀವವಿಜ್ಞಾನದ ತರಗತಿಗಳನ್ನು ನಡೆಸಲಾಗುತ್ತದೆ. ತರಬೇತಿ ನೀಡಿದ ವಿಷಯಗಳ ಪರೀಕ್ಷೆ ಅಂದೇ ಮಾಡಲಾಗುತ್ತದೆ. ಫಲಿತಾಂಶವನ್ನು ಎಸ್‌ಎಂಎಸ್‌ ಮೂಲಕ ಪೋಷಕರಿಗೆ ಕಳುಹಿಸಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

ವಿಳಾಸ– ಎಕ್ಸೆಲ್‌ ಅಕಾಡೆಮಿಕ್ಸ್‌ ಸಂಸ್ಥೆ, ಯಲಹಂಕ ಉಪನಗರ, ಶೇಷಾದ್ರಿಪುರ ಕಾಲೇಜು ಹತ್ತಿರ. ಬೆಂಗಳೂರು–560064. ದೂರವಾಣಿ ಸಂಖ್ಯೆ: 76769–17777, 90363–57499

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.