ADVERTISEMENT

ಏಪ್ರಿಲ್‌ನಲ್ಲಿ 500 ವಟುಗಳಿಗೆ ಲಿಂಗದೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 19:10 IST
Last Updated 15 ಮಾರ್ಚ್ 2021, 19:10 IST
ರುದ್ರಮುನಿ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಮುಖಂಡರಾದ ದಯಾಶಂಕರ್, ಎನ್.ಎಸ್.ನಟರಾಜು, ರಾಜಮ್ಮ ಇದ್ದಾರೆ.
ರುದ್ರಮುನಿ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ಮುಖಂಡರಾದ ದಯಾಶಂಕರ್, ಎನ್.ಎಸ್.ನಟರಾಜು, ರಾಜಮ್ಮ ಇದ್ದಾರೆ.   

ನೆಲಮಂಗಲ: ಶಿವಗಂಗೆಯ ಹೊನ್ನಮ್ಮಗವಿಮಠದ ಜಾತ್ರಾ ಮಹೋತ್ಸವದ ಅಂಗವಾಗಿ 500 ವಟುಗಳಿಗೆ ಲಿಂಗದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರುದ್ರಮುನಿ ಶಿವಾಚಾರ್ಯ ಶ್ರೀಗಳು ತಿಳಿಸಿದರು.

ಪಟ್ಟಣದ ಕವಾಡಿ ಮಠದಲ್ಲಿ ವೀರಶೈವ ಮಹಾಸಭಾ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಏ.27, 28, 29 ರಂದು ನಡೆಯುವ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳಿಗೆ ದೀಕ್ಷೆ ಕೊಡಿಸುವುದರ ಮೂಲಕ ಲಿಂಗಪೂಜೆಯ ಮಹತ್ವ, ಲಿಂಗಾನುಸಂಧಾನದ ಪ್ರಯೋಜನಗಳನ್ನು ತಿಳಿಸಿಕೊಡಲಾಗುತ್ತದೆ. ಲಿಂಗದೀಕ್ಷೆ ಪಡೆಯಲಿಚ್ಚಿಸುವವರು ಶ್ರೀಮಠ ಅಥವಾ ಮಹಾಸಭೆಯನ್ನು ಸಂಪರ್ಕಿಸಲು ತಿಳಿಸಿದರು.

ವೀರಶೈವ ಮಹಾಸಭಾ ಕೇಂದ್ರ ಘಟಕದ ನಿರ್ದೇಶಕ ಎನ್.ಎಸ್.ನಟರಾಜು ಮಾತನಾಡಿದರು.

ADVERTISEMENT

ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದವರಿಗೆ ಸಮುದಾಯದ ಸದಸ್ಯರಿಗೆ ಮತ್ತು ಅರೆಬೊಮ್ಮನಹಳ್ಳಿ ಅಧ್ಯಕ್ಷರಾದ ದೀಪು ಮಂಜುನಾಥ್, ಸೋಂಪುರ ಅಧ್ಯಕ್ಷರಾದ ಪಂಚಾಕ್ಷರಿ, ಕುಲುವನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಾಗಬಸವರಾಜು ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ವೀರಶೈವ ಮಹಾಸಭಾದ ಅಧ್ಯಕ್ಷ ಶಾಂತಕುಮಾರ್, ಜಿಲ್ಲಾ ಘಟಕದ ರಾಜಮ್ಮ, ಕೇಂದ್ರ ಘಟಕದ ಎಂ.ಬಿ.ಮಂಜುನಾಥ್, ದಯಾಶಂಕರ್ ಇದ್ದರು.

ವೀರಶೈವ ಮಹಾ ಸಭಾದ ನಿರ್ದೇಶಕ ಎನ್.ರಾಜಶೇಖರ್ ಅವರು ಕಾರ್ಯಕ್ರಮಕ್ಕೆ ₹25ಸಾವಿರ ದೇಣಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.