ADVERTISEMENT

ನೆಲಮಂಗಲ: ವಿಸಿಎನ್‌ಆರ್‌ ಆಸ್ಪತ್ರೆ ಸೇವೆಗೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 16:15 IST
Last Updated 19 ಆಗಸ್ಟ್ 2025, 16:15 IST
ನೆಲಮಂಗಲ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ನೂರು ಹಾಸಿಗೆಗಳ ಸಾಮರ್ಥ್ಯದ ವಿಸಿಎನ್‌ಆರ್‌ ಆಸ್ಪತ್ರೆಯನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ಎನ್‌.ಗಣೇಶ್‌, ವಿ.ನರಸಿಂಹಮೂರ್ತಿ, ಶಾಸಕ ಎನ್‌.ಶ್ರೀನಿವಾಸ್‌, ವಿ.ರಾಮಸ್ವಾಮಿ ಇದ್ದಾರೆ.

ನೆಲಮಂಗಲ: ಆಸ್ಪತ್ರೆಗಳು ವ್ಯಾಪಾರ ಮನೋಭಾವದಿಂದ ಕಾರ್ಯನಿರ್ವಹಿಸದೆ ರೋಗಿಗಳ ಆರೈಕೆ, ಚಿಕಿತ್ಸೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ನೂರು ಹಾಸಿಗೆಗಳ ವಿಸಿಎನ್‌ಆರ್‌ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ‘ಗ್ರಾಮೀಣ ಭಾಗದಲ್ಲಿ ನೂರು ಹಾಸಿಗೆಗಳ ಸಾಮರ್ಥ್ಯದ, ಸಕಲ ಸೌಲಭ್ಯಗಳುಳ್ಳ ಆಸ್ಪತ್ರೆ ಅವಶ್ಯಕತೆ ಇತ್ತು. ಬದಲಾದ ಜೀವನಶೈಲಿ, ಒತ್ತಡದ ಜೀವನದಿಂದ ಹೃದಯ ಸಂಬಂಧಿ ಹಾಗೂ ಇತರೆ ಕಾಯಿಲೆಗಳು ಹೆಚ್ಚುತ್ತಿವೆ. ಉತ್ತಮ ಆರೋಗ್ಯಕ್ಕಾಗಿ ವ್ಯಾಯಾಮ, ಪೌಷ್ಟಿಕ ಆಹಾರಗಳ ಸೇವನೆ ಅಗತ್ಯ’ ಎಂದು ಸಲಹೆ ನೀಡಿದರು.

ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಪಟ್ಟನಾಯಕನಹಳ್ಳಿ ನಂಜಾವಧೂತ ಸ್ವಾಮೀಜಿ, ಸಂಸದ ಡಾ.ಕೆ.ಸುಧಾಕರ್‌, ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್‌, ಸಂಸ್ಥಾಪಕರಾದ ಪುಟ್ಟಮ್ಮ, ವೆಂಕಟರಾಮಯ್ಯ, ವಿ.ಚಂದ್ರಶೇಖರ್‌, ವಿ.ನರಸಿಂಹಮೂರ್ತಿ, ವಿ.ರಾಮಸ್ವಾಮಿ, ಆಸ್ಪತ್ರೆ ಮುಖ್ಯಸ್ಥ ಡಾ.ವಿನಯ್‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.