
ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ‘ಅಪಘಾತಕ್ಕೀಡಾದವರು ಸರ್ಕಾರದ ಸೌಲಭ್ಯ ಮತ್ತು ವಿಮಾ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳ ಮಾಹಿತಿಗಾಗಿ ತಯಾರಿಸಿದ ‘ನ್ಯೂರೊ ಜಸ್ಟೀಸ್’ ಶೀರ್ಷಿಕೆ ಅಡಿ ನಾಲ್ಕು ಆವೃತ್ತಿಗಳ ಸಂಶೋಧನಾ ಕೃತಿಗಳು ಡಿ. 25ಕ್ಕೆ ಜನಾರ್ಪಣೆಗೊಳ್ಳಲಿವೆ.
ಕೃತಿ ರಚಿಸಿರುವ ಶರಣ್ ಶ್ರೀನಿವಾಸನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮೋಟಾರು ವಾಹನ ಅಪಘಾತದಿಂದ ಆರೋಗ್ಯ ದೌರ್ಬಲ್ಯಕ್ಕೆ ಒಳಗಾದವರಿಗೆ ಕಾನೂನು ಮತ್ತು ವೈದ್ಯಾಧಿಕಾರಿಗಳು ಅರಿವು ಮೂಡಿಸುವುದು ಅಗತ್ಯ. ಮೊದಲು ಈ ಅಧಿಕಾರಿಗಳಿಗೆ ಜಾಗೃತಿ ಇರಬೇಕು’ ಎಂದು ತಿಳಿಸಿದರು.
ಇಂದಿನಿಂದ ಸೇವಾ ಸಂಕಲ್ಪ ಕಾರ್ಯಕ್ರಮ
ಬೆಂಗಳೂರು: ಅಭಯ ಸೇವಾ ಫೌಂಡೇಷನ್ ಸಂಸ್ಥೆಯ 2026ರ ಸೇವೆಗಳ ಸಂಕಲ್ಪಕ್ಕಾಗಿ, ಡಿ.19, 20 ಮತ್ತು 21ಕ್ಕೆ ರಾಜಾಜಿನಗರದ ರಾಮ ಮಂದಿರ ಆಟದ ಮೈದಾನದಲ್ಲಿ ವಾರ್ಷಿಕ ಸೇವಾ ಸಂಕಲ್ಪ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಉಮೇಶ್ ಶೆಟ್ಟಿ ಎಂ.ಬಿ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಡಿ. 21ರಂದು ನಡೆಯುವ ಆರೋಗ್ಯ ಸೇವಾ ಉಚಿತ ಶಿಬಿರದಲ್ಲಿ 20ಕ್ಕೂ ಅಧಿಕ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ಅಂಧತ್ವ ಮುಕ್ತ ಆಂದೋಲನಾ, ಕೃತಕ ಕೈ, ಕಾಲು ಜೋಡಣೆ ಕಾರ್ಯಗಳು ಜರುಗಲಿವೆ. ಸಿಎಸ್‌ಸಿ, ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಅಭಾ ಕಾರ್ಡಿನ ಉಪಯೋಗಗಳ ಕುರಿತು ಕಾರ್ಯಾಗಾರ ನಡೆಯಲಿದೆ’ ಎಂದು ಹೇಳಿದರು.
ವಿಶಿಷ್ಟ ಜಲ ಯೋಗ ಪ್ರದರ್ಶನ ಇಂದು
ಬೆಂಗಳೂರು: ‘ಲಖನೌದ ಯೋಗ ತಜ್ಞೆ ರೋಮಾ ಹೆಮಾನ್ವಿ ಅವರು ಡಿ.19ರಂದು ಜಯನಗರದ ಲಾ ಮಾರ್ವೆಲ್ಲಾ ಹೋಟೆಲ್‌ನಲ್ಲಿ ವಿಶಿಷ್ಟ ಜಲ ಯೋಗ ಪ್ರದರ್ಶನ ನೀಡಲಿದ್ದಾರೆ’ ಎಂದು ಬ್ರಿಲಾರ್ಟೆ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕಿ ಭಾವಿಕಾ ವಾಧ್ವಾನಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘58ರ ಹರೆಯದ ರೋಮಾ ಹೆಮಾನ್ವಿ ಅವರು ಕೇವಲ 5 ನಿಮಿಷಗಳಲ್ಲಿ 32 ಆಸನಗಳನ್ನು ಪ್ರದರ್ಶಿಸಲಿದ್ದಾರೆ. ಈಗಾಗಲೇ ನಗರದಲ್ಲಿ ಈ ಪ್ರದರ್ಶನ ನೀಡಿದ್ದಾರೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.