ADVERTISEMENT

ಬಿಡಿಸಿಸಿ ಬ್ಯಾಂಕ್: ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 19:24 IST
Last Updated 5 ಜನವರಿ 2021, 19:24 IST
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ ಹಾಗೂ ಉಪಾಧ್ಯಕ್ಷ ಪಟ್ಟಾಭಿರಾಮಯ್ಯ ಎಂ.ಸಿ. ಅವರನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಚಿಕ್ಕನಹಳ್ಳಿ ಎನ್.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪವನ್‍ ರಂಗಸ್ವಾಮಿ, ಸೂಲಿವಾರ ಬಿ.ಬಸವರಾಜ್ ಹಾಗೂ ಇತರರು ಅಭಿನಂದಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ ಹಾಗೂ ಉಪಾಧ್ಯಕ್ಷ ಪಟ್ಟಾಭಿರಾಮಯ್ಯ ಎಂ.ಸಿ. ಅವರನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಚಿಕ್ಕನಹಳ್ಳಿ ಎನ್.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪವನ್‍ ರಂಗಸ್ವಾಮಿ, ಸೂಲಿವಾರ ಬಿ.ಬಸವರಾಜ್ ಹಾಗೂ ಇತರರು ಅಭಿನಂದಿಸಿದರು.   

ರಾಜರಾಜೇಶ್ವರಿನಗರ: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ ಬ್ಯಾಂಕ್) ಅಧ್ಯಕ್ಷರಾಗಿಡಿ.ಹನುಮಂತಯ್ಯ, ಉಪಾಧ್ಯಕ್ಷರಾಗಿ ಎಂ.ಸಿ.ಪಟ್ಟಾಭಿರಾಮಯ್ಯ (ಜಯಣ್ಣ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹನುಮಂತಯ್ಯ ಅವರು ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ, ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ವಿಜಯಕುಮಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

‘ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 30 ಶಾಖೆಗಳನ್ನು ಬ್ಯಾಂಕ್ ಹೊಂದಿದ್ದು, ಕೇಂದ್ರ ಕಚೇರಿ ಚಾಮರಾಜಪೇಟೆಯಲ್ಲಿದೆ. ಸುಮಾರು ₹7 ಕೋಟಿ ವೆಚ್ಚದಲ್ಲಿ ಕಟ್ಟಡದ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ರೈತರಿಗೆ ಬೆಳೆಸಾಲ, ಮಧ್ಯಮಾವಧಿ ಸಾಲ, ವಸತಿ, ನಿವೇಶನ ಸಾಲ, ಸಣ್ಣ, ಮಧ್ಯಮ ಕೈಗಾರಿಕೆ, ಚಿನ್ನದ ಸಾಲ, ಕುರಿ, ಕೋಳಿ-ಮೇಕೆ, ಹಸು ಸಾಕಾಣಿಕೆಗೆ ಸಾಲ ಸೇರಿದಂತೆ ವಿವಿಧ ಸಹಕಾರ ಸಂಘಗಳಿಗೆ ಸಾಲ ವಿತರಣೆ ಮತ್ತು ಸಂಘಗಳ ಅಭಿವೃದ್ಧಿಗೆ ಬ್ಯಾಂಕ್ ಮುಂದಾಗಿದೆ’ ಎಂದು ಅಧ್ಯಕ್ಷಡಿ.ಹನುಮಂತಯ್ಯ ತಿಳಿಸಿದರು.

ADVERTISEMENT

ಬ್ಯಾಂಕಿನ ನಿರ್ದೇಶಕರಾದ ದೊಡ್ಡ ಬಸವರಾಜು, ನಾಗರಾಜು ಪಿ.ಎಂ, ಎಚ್.ಎಲ್.ಕೃಷ್ಣಪ್ಪ, ವೈ.ಎಚ್. ಮಂಜು, ಎಚ್.ಎನ್.ಅಶೋಕ್, ಕೃಷ್ಣಮೂರ್ತಿ, ಜಯರಾಮು, ಸೋಮಶೇಖರ ರೆಡ್ಡಿ, ಚುಂಚೇಗೌಡ, ಸೊಣ್ಣಪ್ಪ , ಬಾಬುರೆಡ್ಡಿ, ಸೊಣ್ಣೇಗೌಡ, ಸತೀಶ್‍ಗೌಡ, ವಿಜಯ್‍ದೇವ್, ಮಹಬೂಬ್, ಆಂಜನಪ್ಪ , ವಾಣಿಶ್ರೀ ಅವರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.