ಕ್ಯಾನ್ಸರ್
(ಐಸ್ಟೋಕ್ ಚಿತ್ರ)
ಬೆಂಗಳೂರು: ಕ್ಯಾನ್ಸರ್ ಅನ್ನು ಪ್ರಾಥಮಿಕ ಹಂತದಲ್ಲಿ ಹಾಗೂ ಮರುಕಳಿಸುವ ಪೂರ್ವದಲ್ಲಿಯೇ ಪತ್ತೆ ಹಚ್ಚುವ ‘ನಾವೆಲ್–ಬಯೋಮಾರ್ಕರ್ ಡಯಾಗ್ನಸ್ಟಿಕ್’ ಎಂಬ ಹೊಸ ಪರೀಕ್ಷಾ ವಿಧಾನವೊಂದನ್ನು ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, ಟ್ರುಕನ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ.
ಈ ಹೊಸ ಸಂಶೋಧನೆಯ ನೆರವಿನಿಂದ ಕ್ಯಾನ್ಸರ್ ಬರುವ ಮುನ್ನ ಹಾಗೂ ಮರುಕಳಿಸುವ ಪೂರ್ವದಲ್ಲಿಯೇ ನಿಖರವಾಗಿ ಪತ್ತೆ ಹಚ್ಚುವ ಜೊತೆಗೆ, ಯಾವುದೇ ರೀತಿಯ ಕ್ಯಾನ್ಸರ್ ಆಗಿದ್ದರೂ ಅದಕ್ಕೆ ನಿಖರವಾದ ಹಾಗೂ ಪರಿಣಾಮಕಾರಿ ಚಿಕಿತ್ಸೆಯನ್ನು ಈ ಪರೀಕ್ಷೆ ಮೌಲ್ಯಮಾಪನ ಮಾಡಲಿದೆ ಎಂದು ಎಚ್‌ಸಿಜಿ ಪ್ರಕಟಣೆ ತಿಳಿಸಿದೆ.
ಈ ಪರೀಕ್ಷೆಯ ಫಲಿತಾಂಶಗಳು ಮುಂದೆ ಕಿಮೊ ಅಥವಾ ಉದ್ದೇಶಿತ ಚಿಕಿತ್ಸೆಗೆ ಒಳಗಾಗುವ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ನೆರವಾಗುತ್ತದೆ ಎಂದಿದೆ.
‘ಈ ಹೊಸ ಪರೀಕ್ಷೆ ಕ್ಯಾನ್ಸರ್ ಪತ್ತೆಗೆ ಈಗಿರುವ ವಿಧಾನಗಳಿಗಿಂತ ಉತ್ತಮವಾಗಿದೆ’ ಎಂದು ಎಚ್‌ಸಿಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಬಿ.ಎಸ್ ಅಜಯ್ ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.