ADVERTISEMENT

ಪತ್ರಿಕಾ ವಿತರಕರ ಉತ್ಸಾಹ; ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 3:07 IST
Last Updated 23 ಮಾರ್ಚ್ 2020, 3:07 IST
ಜನತಾ ಕರ್ಫ್ಯೂ ವೇಳೆ ಟೆಕಿಯೊಬ್ಬರು ಸ್ವಯಂಪ್ರೇರಿತರಾಗಿ ಕೆ.ಎಚ್‌.ರಸ್ತೆಯಲ್ಲಿ ದ್ರಾವಣ ಸಿಂಪಡಿಸಿದರು – ಪ್ರಜಾವಾಣಿ ಚಿತ್ರ
ಜನತಾ ಕರ್ಫ್ಯೂ ವೇಳೆ ಟೆಕಿಯೊಬ್ಬರು ಸ್ವಯಂಪ್ರೇರಿತರಾಗಿ ಕೆ.ಎಚ್‌.ರಸ್ತೆಯಲ್ಲಿ ದ್ರಾವಣ ಸಿಂಪಡಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಪತ್ರಿಕಾ ವಿತರಕರು, ‘ಜನತಾ ಕರ್ಫ್ಯೂ’ ಆರಂಭವಾಗುವ ಮುನ್ನವೇ ಓದುಗರ ಮನೆ ಮನೆಗೆ ಪತ್ರಿಕೆಗಳನ್ನು ತಲುಪಿಸಿದರು. ಅವರ ಶ್ರದ್ಧೆಯ ಕೆಲಸಕ್ಕೂ ಓದುಗರು ‘ಮೆಚ್ಚುಗೆಯ ಚಪ್ಪಾಳೆ’ ತಟ್ಟಿದ್ದಾರೆ.

ನಸುಕಿನಲ್ಲಿ 3 ಗಂಟೆಗೆ ಮುನ್ನವೇ ನಸುಕಿನಲ್ಲಿ ನಿಗದಿತ ಸ್ಥಳಗಳಿಗೆ ಬಂದ ವಿತರಕರು, ಉತ್ಸಾಹದಿಂದಲೇ ಪತ್ರಿಕೆ ಜೋಡಿಸುವ ಕೆಲಸ ಮಾಡಿದರು. ಕೊರೊನಾ ವೈರಾಣು ಹರಡುವಿಕೆಯನ್ನು ತಡೆಯಲು ಪ್ರತಿಯೊಂದು ಪತ್ರಿಕೆಗೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಓದುಗರ ಮನೆಗಳಿಗೆ ತಲುಪಿಸಿದರು. ಪತ್ರಿಕೆ ತಲುಪಿಸುವ ಹುಡುಗರು ಅವರಿಗೆ ಸಾಥ್ ನೀಡಿದರು.

ಕೊರೊನಾ ವೈರಾಣು ಹರಡದಂತೆ ದ್ರಾವಣ ಸಿಂಪಡಿಸಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಗಳ ಬಂಡಲ್‌ಗಳನ್ನು ವಾಹನಗಳ ಮೂಲಕ ವಿತರಕರಿಗೆ ಕಳುಹಿಸಲಾಗಿತ್ತು. ಅದನ್ನು ಸ್ವೀಕರಿಸಿದ ವಿತರಕರು ಶ್ರದ್ಧೆಯಿಂದಲೇ ಓದುಗರ ಕೈಗೆ ಸಿಗುವಂತೆ ಮಾಡಿದರು. ಕರ್ಫ್ಯೂ ಆರಂಭಕ್ಕೂ ಮುನ್ನವೇ ಪತ್ರಿಕೆಗಳು ಓದುಗರ ಮನೆ ತಲುಪಿದ್ದವು. ವಿತರಕರ ಕೆಲಸವನ್ನು ಮೆಚ್ಚಿದ ಓದುಗರು, ಪ್ರಶಂಸೆ
ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.