ADVERTISEMENT

ದವಡೆಯಲ್ಲಿ ಗಡ್ಡೆ: ನೈಜೀರಿಯಾ ಪಾದ್ರಿಗೆ ಬೆಂಗಳೂರಲ್ಲಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2023, 4:02 IST
Last Updated 29 ಏಪ್ರಿಲ್ 2023, 4:02 IST
   

ಬೆಂಗಳೂರು: ದವಡೆಯಲ್ಲಿ ಕಾಣಿಸಿಕೊಂಡಿದ್ದ ಅಪರೂಪದ ಗಡ್ಡೆಯಿಂದ (ಅಮೆಲೋಬ್ಲಾಸ್ಟೋಮಾ) ಸಮಸ್ಯೆ ಎದುರಿಸುತ್ತಿದ್ದ 55 ವರ್ಷದ ನೈಜೀರಿಯಾದ ಪಾದ್ರಿಗೆ ಇಲ್ಲಿನ ಫೊರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.  

ಆಸ್ಪತ್ರೆಯ ಡಾ. ಸಂದೀಪ್ ನಾಯಕ್, ಡಾ. ಆಥಿರಾ ರಾಮಕೃಷ್ಣನ್ ಮತ್ತು ಡಾ. ಸುಷ್ಮಾ ಮೆಹ್ತಾ ನೇತೃತ್ವದ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. 

‘ರೋಗಿಯು ಈ ಗಡ್ಡೆಗೆ ನೈಜೀರಿಯಾದಲ್ಲಿ ಮೂರು ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದರೂ ಗಡ್ಡೆ ಬೆಳೆಯುತ್ತಲೇ ಇತ್ತು. ಇದರಿಂದ ಆತಂಕಕ್ಕೆ ಒಳಗಾದ ಅವರು, ಇಲ್ಲಿಗೆ ಬಂದು ದಾಖಲಾದರು. ದವಡೆಯಲ್ಲಿ ಬೆಳೆಯುವ ಅಪರೂಪದ ಈ ಗಡ್ಡೆಯನ್ನು ಗುರುತಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಗಡ್ಡೆಯು ಸುಮಾರು 15x20 ಸೆಂ.ಮೀ. ಬೆಳೆದು, ಸಂಪೂರ್ಣ ಮುಖವನ್ನೇ ಆವರಿಸಿಕೊಂಡಿತ್ತು. ಇದರಿಂದ ರೋಗಿಗೆ ಆಹಾರ ಸೇವನೆಯೇ ಕಷ್ಟವಾಗಿತ್ತು’ ಎಂದು ಡಾ. ಸಂದೀಪ್ ನಾಯಕ್ ತಿಳಿಸಿದರು. 

ADVERTISEMENT

‘ಗಡ್ಡೆ ತೆಗೆದ ಜಾಗದಲ್ಲಿ ದವಡೆಯ ಮೂಳೆಯನ್ನು ಮರುನಿರ್ಮಾಣ ಮಾಡಲು ರೋಗಿಯ ಕಾಲಿನ ಮೂಳೆಯನ್ನು ಅಳವಡಿಸಲಾಯಿತು. ಇದಕ್ಕಾಗಿ 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಯಿತು. ಕಾಲಿನ ಮೂಳೆಯ ಬೆಂಬಲ ನೀಡದಿದ್ದರೆ ರೋಗಿಯು ಬಾಯಿ ತೆರೆದು, ಆಹಾರ ತಿನ್ನಲು ಸಾಧ್ಯವಾಗುತ್ತಿರಲಿಲ್ಲ. ಈಗ ರೋಗಿ ಸಂಪೂರ್ಣ ಗುಣಮುಖರಾಗಿದ್ದು, ತಮ್ಮ ತಾಯ್ನಾಡಿಗೆ ಹಿಂತಿರುಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.