ADVERTISEMENT

ನೋ ಪಾರ್ಕಿಂಗ್‌ ದಂಡ ಹೆಚ್ಚಳಕ್ಕೆ ‍ಪ್ರಸ್ತಾವ

ಬಿಬಿಎಂಪಿಗೆ ಸಂಚಾರ ಪೊಲೀಸರಿಂದ ಕೋರಿಕೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2019, 19:48 IST
Last Updated 17 ಜುಲೈ 2019, 19:48 IST
   

ಬೆಂಗಳೂರು: ನಗರದ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವವರಿಗೆಭಾರಿ ದಂಡ ವಿಧಿಸುವ ಸಂಬಂಧ ನಿಯಮ ರೂ‌ಪಿಸುವಂತೆ ಬಿಬಿಎಂಪಿಗೆ ಬೆಂಗಳೂರು ಸಂಚಾರ ಪೊಲೀಸರು ಕೋರಿದ್ದಾರೆ.

ಬೃಹತ್‌ ಮುಂಬೈ ಪಾಲಿಕೆಯು (ಬಿಎಂಸಿ) 2017ರಲ್ಲಿ ಜಾರಿಗೆ ತಂದಿರುವ ಕಾನೂನಿನ ಬಗ್ಗೆ ಅಧ್ಯಯನ ನಡೆಸಿ ಅದೇ ಮಾದರಿಯಲ್ಲಿ ಬಿಬಿಎಂಪಿಯೂ ಕಾನೂನು ತರುವಂತೆ ಮನವಿ ಮಾಡಿದ್ದಾರೆ.

ಕಾನೂನು ಬಾಹಿರವಾಗಿ ವಾಹನಗಳನ್ನು ಪಾರ್ಕಿಂಗ್ ಮಾಡಿದವರಿಗೆ ₹5,000ದಿಂದ ₹10,000 ದಂಡ ವಿಧಿಸಬಹುದು ಎಂದು ಅವರು ಬಿಎಂಸಿಯ ಸುತ್ತೋಲೆಯನ್ನು ಬಿಬಿಎಂಪಿಗೆ ಕಳುಹಿಸಿದ್ದಾರೆ. ಇದನ್ನು ಆಧರಿಸಿ ಕಾನೂನು ರೂಪಿಸಲು ಬಿಬಿಎಂಪಿ ಕರಡು ರೂಪಿಸಬೇಕಿದೆ.

ADVERTISEMENT

‘ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಪ್ರಮುಖ ರಸ್ತೆಯಲ್ಲಿ ಅನಧಿಕೃತ ಪಾರ್ಕಿಂಗ್‌ನಿಂದಾಗಿ ಸಂಚಾರ ದಟ್ಟಣೆ ನಿಭಾಯಿಸುವುದು ಕಷ್ಟವಾಗಿದೆ. ಅದನ್ನು ತಡೆಯಲು ಮುಂಬೈ ಮಾದರಿಯ ಕಾನೂನು ಅಗತ್ಯವಿದೆ. ಅದನ್ನು ಬಿಬಿಎಂಪಿ ರೂಪಿಸಿ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ಆಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ತರಬಹುದು’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ. ಹರಿಶೇಖರನ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.