ADVERTISEMENT

ವಿಶ್ವ ತಂಬಾಕು ರಹಿತ ದಿನ: ಕ್ಯಾನ್ಸರ್ ಪತ್ತೆಗೆ ತಪಾಸಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 16:16 IST
Last Updated 1 ಜೂನ್ 2025, 16:16 IST
ಶಿಬಿರದಲ್ಲಿ ವ್ಯಕ್ತಿಯೊಬ್ಬರಿಗೆ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು
ಶಿಬಿರದಲ್ಲಿ ವ್ಯಕ್ತಿಯೊಬ್ಬರಿಗೆ ಶ್ವಾಸಕೋಶ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು   

ಬೆಂಗಳೂರು: ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯು ಸಂಚಾರ ಪೊಲೀಸರು ಹಾಗೂ ಸಾರ್ವಜನಿಕರಿಗೆ ಉಚಿತ ಶ್ವಾಸಕೋಶ ಕ್ಯಾನ್ಸರ್ ತಪಾಸಣೆಯನ್ನು ಶನಿವಾರ ನಡೆಸಿದರು.

ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ, ಐದು ವರ್ಷಗಳು ಹಾಗೂ ಅದಕ್ಕಿಂತ ಹೆಚ್ಚಿನ ಅವಧಿಯಿಂದ ಧೂಮಪಾನ ಮಾಡುತ್ತಿರುವವರಿಗೆ ತಪಾಸಣೆ ಮಾಡಿಸಿಕೊಳ್ಳುವಂತೆ ಪ್ರೇರೇಪಿಸುವುದು ಶಿಬಿರದ ಉದ್ದೇಶವಾಗಿತ್ತು. ಈ ಶಿಬಿರದಲ್ಲಿ ಕ್ಯಾನ್ಸರ್ ಹಾಗೂ ಶ್ವಾಸಕೋಶ ತಜ್ಞರು ತಪಾಸಣೆಗೊಳಗಾದವರ ಜತೆಗೆ ಸಮಾಲೋಚನೆ ನಡೆಸಿದರು. ಬಾಯಿ ಕ್ಯಾನ್ಸರ್ ಪತ್ತೆ ಸಂಬಂಧವೂ ತಪಾಸಣೆ ನಡೆಸಿ, ಕೆಲವರಿಗೆ ಸಿಟಿ ಸ್ಕ್ಯಾನ್‌ ಕೂಡ ಮಾಡಲಾಯಿತು. 

ಈ ವೇಳೆ ಮಾತನಾಡಿದ ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ. ರೋಶಿನಿ ದಾಸ್‌ಗುಪ್ತ, ‘ಧೂಮಪಾನದಿಂದ ಶ್ವಾಸಕೋಶ ಸೇರಿ ದೇಹದ ವಿವಿಧ ಅಂಗಾಂಗಗಳಿಗೆ ಹಾನಿಯಾಗಲಿದೆ. ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ ಸೇರಿದಂತೆ ವಿವಿಧ ಕಾಯಿಲೆಗಳು ಕಾಣಿಸಿಕೊಳ್ಳಲಿವೆ. ನೇರ ಮತ್ತು ಪರೋಕ್ಷ ಧೂಮಪಾನಗಳೆರಡೂ ನಮ್ಮ ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿ. ಆದ್ದರಿಂದ ಚಿಕಿತ್ಸೆಯ ಜತೆಗೆ ಅರಿವು ಮೂಡಿಸಲಾಗುತ್ತಿದೆ’ ಎಂದು ಹೇಳಿದರು. 

ADVERTISEMENT

ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್‌ನ ಕರ್ನಾಟಕ ಪ್ರಾದೇಶಿಕ ವ್ಯವಹಾರದ ಮುಖ್ಯಸ್ಥ ಮನಿಶ್ ಕುಮಾರ್, ‘ನಿಯಮಿತ ಆರೋಗ್ಯ ತಪಾಸಣೆ ಉತ್ತೇಜಿಸುವ ಮೂಲಕ, ತಂಬಾಕಿನ ವಿನಾಶಕಾರಿ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಆ ಮೂಲಕ ಕ್ಯಾನ್ಸರ್ ತಡೆಗೆ ಶ್ರಮಿಸಲಾಗುತ್ತಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.