ADVERTISEMENT

ಕರ್ಕಶ ಶಬ್ದ: ಚಾಲಕನೊಂದಿಗೆ ಮೆಕ್ಯಾನಿಕ್ ವಿರುದ್ಧವೂ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 18:50 IST
Last Updated 7 ಡಿಸೆಂಬರ್ 2018, 18:50 IST
ಹಾರನ್‌
ಹಾರನ್‌   

ಬೆಂಗಳೂರು: ಶಬ್ದ ಮಾಲಿನ್ಯ ಉಂಟು ಮಾಡುವ ಕರ್ಕಶ ಹಾರ್ನ್‌ ಬಳಸುವ ವಾಹನಗಳ ಚಾಲಕರೊಂದಿಗೆ, ಹಾರ್ನ್‌ ಅಳವಡಿಸಿಕೊಟ್ಟ ಮೆಕ್ಯಾನಿಕ್ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲು ಸಂಚಾರ ಪೊಲೀಸರು ತೀರ್ಮಾನಿಸಿದ್ದಾರೆ.

ನಗರದ ಶಾಲಾ– ಕಾಲೇಜು, ಆಸ್ಪತ್ರೆ, ಜನವಸತಿ ಪ್ರದೇಶ ಹಾಗೂ ಧಾರ್ಮಿಕ ಕೇಂದ್ರಗಳ ಬಳಿ ಕರ್ಕಶ ಹಾರ್ನ್ ಮಾಡಿಕೊಂಡು ಸಂಚರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ) ಪಿ.ಹರಿಶೇಖರನ್, ‘ಕರ್ಕಶ ಹಾರ್ನ್ ಬಳಸುವವರು ಹಾಗೂ ಅದಕ್ಕೆ ಸಹಕರಿಸುವ ಮೆಕ್ಯಾನಿಕ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಿ’ ಎಂದು13 ಅಂಶಗಳ ಸೂಚನೆಯನ್ನು ಸಂಚಾರ ಪೊಲೀಸರಿಗೆ ನೀಡಿದ್ದಾರೆ.

‘ಪ್ರಸಕ್ತ ವರ್ಷದ ನವೆಂಬರ್ ಅಂತ್ಯದವರೆಗೆ, ಕರ್ಕಶ ಹಾರ್ನ್‌ ಬಳಸಿದ್ದ 21,581 ಚಾಲಕರ ವಿರುದ್ಧ ಮೋಟರು ವಾಹನಗಳ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡಿದ್ದ 8,808 ಮಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ನಗರದ ಪ್ರತಿ ಠಾಣೆಯ ಸಿಬ್ಬಂದಿ, ಕರ್ಕಶ ಹಾರ್ನ್ ಹಾಗೂ ದೋಷಪೂರಿತ ಸೈಲೆನ್ಸರ್ ಪತ್ತೆಗೆ ನಿರಂತರವಾಗಿ ಕಾರ್ಯಾಚರಣೆ ನಡೆಸಲಿದ್ದಾರೆ’ ಎಂದು ಹರಿಶೇಖರನ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.