ADVERTISEMENT

ಡಿಜೆ ಹಳ್ಳಿ ಗಲಭೆ ಪ್ರಕರಣ| ಸಂಪತ್‌ ರಾಜ್ ಮನೆ ಗೋಡೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 18:54 IST
Last Updated 1 ನವೆಂಬರ್ 2020, 18:54 IST
ಸಂಪತ್‌ ರಾಜ್
ಸಂಪತ್‌ ರಾಜ್   

ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿರುವ ಕಾಂಗ್ರೆಸ್ ಮುಖಂಡ ಆರ್. ಸಂಪತ್‌ ರಾಜ್‌ರ ಹುಡುಕಾಟ ಮುಂದುವರಿದಿದೆ. ಅವರ ಮನೆಗೆ ಭಾನುವಾರ ಬೆಳಿಗ್ಗೆ ಹೋಗಿದ್ದ ಸಿಸಿಬಿ ಪೊಲೀಸರು,‘ಪ್ರಕರಣದ ವಿಚಾರಣೆಗೆ ಬನ್ನಿ’ ಎಂದು ಗೋಡೆಗೆ ನೋಟಿಸ್ ಅಂಟಿಸಿ ಬಂದಿದ್ದಾರೆ.

ಸಂಪತ್‌ರಾಜ್, ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ದಾಖಲಾಗಿದ್ದ ಆಸ್ಪತ್ರೆಯಿಂದ ಅ. 30ರಂದು ಬಿಡುಗಡೆಯಾಗಿ ಪರಾರಿಯಾಗಿದ್ದಾರೆ.

ಅವರ ಪತ್ತೆಗಾಗಿ ಸಿಸಿಬಿಯ ವಿಶೇಷ ತಂಡಗಳು ಹುಡುಕಾಟ ನಡೆಸಿವೆ. ಅವರು ಮನೆಗೆ ಬಂದು ಹೋಗುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಇದೇ ಕಾರಣಕ್ಕೆ ನೋಟಿಸ್‌ ಅಂಟಿಸಿದ್ದಾರೆಂದು ಗೊತ್ತಾಗಿದೆ.

ADVERTISEMENT

‘ಪುಲಕೇಶಿ ನಗರದಲ್ಲಿರುವ ಅವರ ಎರಡು ಮನೆಗಳು, ಅವರ ಸಹೋದರಿಯ ಮನೆ ಗೋಡೆಗೆ ನೋಟಿಸ್ ಅಂಟಿಸಲಾಗಿದೆ. ‘ನೋಟಿಸ್ ನೋಡಿದ ಕೂಡಲೇ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಬೇಕು. ತಪ್ಪಿದ್ದಲ್ಲಿ, ನೀವು ಉದ್ದೇಶಪೂರ್ವಕವಾಗಿ ತನಿಖೆಗೆ ಹಾಜರಾಗುತ್ತಿಲ್ಲ ಹಾಗೂ ವಿಚಾರಣೆಗೆ ಸಹಕರಿಸುತ್ತಿಲ್ಲವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.