ADVERTISEMENT

ಹಾ.ಮೈ. ಸೂರಿ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 2:04 IST
Last Updated 27 ಡಿಸೆಂಬರ್ 2020, 2:04 IST
ಎಚ್.ಎಂ. ಸೂರಿ
ಎಚ್.ಎಂ. ಸೂರಿ   

ಬೆಂಗಳೂರು: ನಗರದ ಪದ್ಮನಾಭನಗರ ನಿವಾಸಿ, ಹಾಸ್ಯ ಬರಹಗಾರ ಎಚ್.ಎಂ. ಸೂರ್ಯನಾರಾಯಣ (85) ಅವರು ಹೃದಯಾಘಾತದಿಂದ ಡಿ.20ರಂದು ನಿಧನರಾದರು.

ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ನಿವೃತ್ತಿಯ ನಂತರ ಹಾಸ್ಯ ಬರಹಗಾರ, ಚುಟುಕು ಲೇಖನಕಾರರಾಗಿಯೇ ಗುರುತಿಸಿಕೊಂಡಿದ್ದರು. ಹಾ. ಮೈ. ಸೂರಿ ಎಂದೇ ಪ್ರಚಲಿತರಾಗಿದ್ದ ಅವರು ನಾಲ್ಕು ದಶಕಗಳಿಂದ ಪ್ರಜಾವಾಣಿ, ಸುಧಾ, ಮಯೂರ ಸೇರಿದಂತೆ ಅನೇಕ ದಿನಪತ್ರಿಕೆ, ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಿಗೆ ಹಾಸ್ಯ ಲೇಖನ ಬರೆಯುತ್ತಿದ್ದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.