ADVERTISEMENT

ಜಯನಗರದಲ್ಲೂ ಒನ್‌ಪ್ಲಸ್‌ ಎಕ್ಸ್‌ಪೀರಿಯನ್ಸ್‌ ಷೋರೂಂ

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 20:16 IST
Last Updated 30 ಜುಲೈ 2018, 20:16 IST
   

ಬೆಂಗಳೂರು:ಆ್ಯಪಲ್‌ ನಂತರ ಸ್ಮಾರ್ಟ್‌ಫೋನ್‌ ಖರೀದಿಗೆ ಜನರನ್ನು ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದು ಒನ್‌ಪ್ಲಸ್‌ ಎಂದರೆ ತಪ್ಪಾಗಲಾರದು. ಯುವ ಸಮೂಹದ ನಾಡಿಮಿಡಿತ ಅರಿತಿರುವ ಕಂಪನಿಯು ವರ್ಷಕ್ಕೊಮ್ಮೆ ಹೊಸ ವೈಶಿಷ್ಟ್ಯಗಳಿರುವ ಫೋನ್‌ಗಳನ್ನು ಬಿಡುಗಡೆ ಮಾಡಿ ಅವರ ಮನಗೆಲ್ಲುವ ಮೂಲಕ ತನ್ನ ಮಾರುಕಟ್ಟೆಯನ್ನೂ ವಿಸ್ತರಿಸಿಕೊಳ್ಳುತ್ತಿದೆ.

ಕರ್ನಾಟಕದಲ್ಲಿ ಒನ್‌ಪ್ಲಸ್‌ ಪ್ರಿಯರಿಗೆ ಕಂಪನಿ ಹೊಸ ಸುದ್ದಿ ತಂದಿದೆ. ಇನ್ನುಮುಂದೆ ಕಂಪನಿಯ ಉತ್ಪನ್ನಗಳನ್ನು ಖರೀದಿಸಲುಬೆಂಗಳೂರಿನ ಬ್ರಿಗೇಡ್ ರಸ್ತೆಗೇ ದೌಡಾಯಿಸಬೇಕಾಗಿಲ್ಲ. ಏಕೆಂದರೆ ಜಯನಗರದಲ್ಲಿಯೂ ಒಂದು ಎಕ್ಸ್‌ಪೀರಿಯನ್ಸ್‌ ಷೋರೂಂ ತೆರೆದಿದೆ. ಹೀಗೆಯೇ ಮುಂಬೈ ಮತ್ತು ಕೋಲ್ಕತ್ತದಲ್ಲಿಯೂ ಎಕ್ಸ್‌ಪೀರಿಯನ್ಸ್‌ ಷೋರೂಂಗಳನ್ನು ತೆರೆಯಲಾಗಿದೆ.

ಕಂಪನಿಯ ಒಟ್ಟಾರೆ ಆದಾಯದ ಮೂರನೇ ಒಂದು ಭಾಗ ಭಾರತದಿಂದಲೇ ಗಳಿಸಿದೆ. ಆನ್‌ಲೈನ್‌ನಲ್ಲಿ ಅಮೆಜಾನ್‌ ಮೂಲಕ ಉತ್ತಮ ಮಾರಾಟ ಸಾಧಿಸುತ್ತಿದ್ದರೂ 2018ರ ಮೊದಲಾರ್ಧದಲ್ಲಿ ಇನ್ನೂ 10 ಆ‍ಫ್‌ಲೈನ್‌ ಮಳಿಗೆಗಳನ್ನು ಆರಂಭಿಸಲು ಉದ್ದೇಶಿಸಿದೆ.

ADVERTISEMENT

‘ಭಾರತದ ಗ್ರಾಹಕರು ಆನ್‌ಲೈನ್‌ನಲ್ಲಿ ಫೋನ್‌ ಖರೀದಿಸುವುದಕ್ಕೂ ಮುನ್ನ ಮಳಿಗೆಗೆ ಹೋಗಿ ಅದನ್ನು ಪರಿಶೀಲಿಸಿದ ಬಳಿಕ ಆನ್‌ಲೈನ್‌ನಲ್ಲಿ ಖರೀದಿಸುವ ಮನೋಧರ್ಮ ಹೊಂದಿದ್ದಾರೆ. ಹೀಗಾಗಿ ಆಫ್‌ಲೈನ್‌ ಮಳಿಗೆಗಳನ್ನು ತೆರೆಯಲು ಗಮನ ನೀಡಲಾಗುತ್ತಿದೆ’ ಎನ್ನುವುದುಒನ್‌ಪ್ಲಸ್‌ ಇಂಡಿಯಾದ ಭಾರತದ ಪ್ರಧಾನ ವ್ಯವಸ್ಥಾಪಕ ವಿಕಾಸ್‌ ಅಗರ್‌ವಾಲ್‌ ಅವರ ಅಭಿಮತ.

ಮಳಿಗೆಗಳ ಕುರಿತು ಹೆಚ್ಚಿನ ಮಾಹಿತಿಗೆ: https://www.oneplus.in/experience-and-retail#/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.