ADVERTISEMENT

ಬೆಂಗಳೂರಿಗೆ ಈಜಿಪ್ಟ್‌ ಈರುಳ್ಳಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 19:30 IST
Last Updated 7 ಡಿಸೆಂಬರ್ 2019, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಈಜಿಪ್ಟ್‌ನಿಂದ ಆಮದು ಮಾಡಿಕೊಳ್ಳಲಾಗಿರುವ ಈರುಳ್ಳಿ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಂದಿಳಿದಿದೆ. 35 ಕೆ.ಜಿಯ ಎರಡು ಸಾವಿರ ಚೀಲಗಳು ಮುಂಬೈನಿಂದ ಶನಿವಾರ ಬೆಳಿಗ್ಗೆ ಬಂದಿವೆ. ಪ್ರತಿ ಕ್ವಿಂಟಲ್‌ಗೆ ₹10ರಿಂದ 12 ಸಾವಿರ ಇದೆ.

ಅಲ್ಲದೆ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ 50 ಕೆ.ಜಿ ತೂಕದ 34ಸಾವಿರ ಚೀಲಗಳು ಬಂದಿವೆ. ಸ್ಥಳೀಯ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹ 10ರಿಂದ 14ಸಾವಿರವರೆಗಿದೆ.

ಈಜಿಪ್ಟ್‌ ಈರುಳ್ಳಿ ರುಚಿ ಕಡಿಮೆ ಇರುವುದರಿಂದ ಬೆಲೆಯೂ ಕಡಿಮೆ. ಹೆಚ್ಚು ಮಾರಾಟವೂ ಆಗುತ್ತಿಲ್ಲ. ಖುದ್ದು ವರ್ತಕರೇ ಆಮದು ಮಾಡಿಕೊಂಡಿದ್ದಾರೆ ಎಂದು ಎಪಿಎಂಸಿ ಮಾರು
ಕಟ್ಟೆಯ ಈರುಳ್ಳಿ ಮತ್ತು ಆಲೂಗೆಡ್ಡೆ ವರ್ತಕರ ಸಂಘದ ಕಾರ್ಯದರ್ಶಿ ಸಿ.ಉದಯ ಶಂಕರ್‌ ತಿಳಿಸಿದರು.

ADVERTISEMENT

ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ₹180 ಇದೆ. ಚಿಕ್ಕ‍ಮಾರುಕಟ್ಟೆಗಳಲ್ಲಿ ₹200 ಇದೆ. ಕಮಿಷನ್‌, ಹಮಾಲಿ ಹಾಗೂ ಆರ್‌ಎಂಸಿ ಶುಲ್ಕ ಮತ್ತಿತರ ಖರ್ಚುಗಳು ಸೇರುವುದರಿಂದ ಗ್ರಾಹಕರ ಕೈ ಸೇರುವ ಹೊತ್ತಿಗೆ ದರ ದುಬಾರಿಯಾಗುತ್ತಿದೆ ಎಂದು ಅವರು ತಿಳಿಸಿದರು.

ಈ ಸಮಯದಲ್ಲಿ ಸ್ಥಳೀಯ ಈರುಳ್ಳಿ ಲಕ್ಷ ಚೀಲಕ್ಕಿಂತಲೂ ಹೆಚ್ಚು ಬರಬೇಕು. ಆದರೆ, ಬೇಡಿಕೆ ಮತ್ತು ಪೂರೈಕೆ ನಡುವೆ ಶೇ 60ರಿಂದ 65ರಷ್ಟು ವ್ಯತ್ಯಯವಿದೆ. ಈರುಳ್ಳಿ ಆವಕ ಪ್ರಮಾಣ ಹೆಚ್ಚಿದರೆ ದರ ನಿಯಂತ್ರಣಕ್ಕೆ ಬರಬಹುದು ಎಂದು ಅವರು ನುಡಿದರು.

ಈರುಳ್ಳಿ ಮಳಿಗೆಗಳ ಮೇಲೆ ಅನಗತ್ಯವಾಗಿ ದಾಳಿ ನಡೆಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಇದು ತಪ್ಪಬೇಕು
ಸುಧಾಕರ ಎಸ್‌. ಶೆಟ್ಟಿ, ಮಾಜಿ ಅಧ್ಯಕ್ಷ, ಎಫ್‌ಕೆಸಿಸಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.