ADVERTISEMENT

ಪುರಭವನದ ಎದುರು ಪ್ರತಿಭಟನೆ ನಿರ್ಬಂಧಿಸುವ ನಿರ್ಣಯ ಹರಿದು ಹಾಕಿದ ವಿಪಕ್ಷದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 10:24 IST
Last Updated 3 ಮಾರ್ಚ್ 2020, 10:24 IST
   

ಬೆಂಗಳೂರು:ಪುರಭವನ ಮುಂದೆ ಪ್ರತಿಭಟನೆ ನಡೆಸುವುದನ್ನು ನಿರ್ಬಂಧಿಸುವ ನಿರ್ಣಯದ ಪ್ರತಿಯನ್ನು ಹರಿದು ಹಾಕುವ ಮೂಲಕ ಪಾಲಿಕೆಯ ವಿರೋಧಪಕ್ಷಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಿರ್ಣಯ ಹಿಂಪಡೆಯಲು ಒಪ್ಪದ ಮೇಯರ್ ನಿಲುವನ್ನು ಖಂಡಿಸಿ ಸಭಾತ್ಯಾಗ ನಡೆಸಿದರು.

ಬೆಳಿಗ್ಗೆ ಸಭೆ ಆರಂಭವಾದಾಗ ವಿರೋಧ ಪಕ್ಷದವರು ಧರಣಿ ನಡೆಸಿದ್ದರಿಂದ ಮೇಯರ್ ಮಧ್ಯಾಹ್ನ 2 ಗಂಟೆಗೆ ಸಭೆಯನ್ನು ಮುಂದೂಡಿದ್ದರು.

ADVERTISEMENT

ಮಧ್ಯಾಹ್ನ ಸಭೆ ಆರಂಭವಾದಾಗ ಶೂನ್ಯ ವೇಳೆಯಡಿ ಮಾತನಾಡಲು ಬಿಜೆಪಿ ಸದಸ್ಯ ರಾಜು ಅವರಿಗೆ ಮಾತನಾಡಲು ಅವಕಾಶ ಕಲ್ಪಿಸಿದರು. ಅಷ್ಟರಲ್ಲಿ ಕಾಂಗ್ರೆಸ್ನ ಮಂಜುನಾಥ ರೆಡ್ಡಿ ಅವರು ಕೆಎಂಸಿ ಕಾಯ್ದೆಯ ನಿಯಮ 52ರ ಅಡಿ ನಿಲುವಳಿ ಸೂಚನೆ ಮಂಡಿಸಿದರು. ಅದನ್ನು ತಳ್ಳಿಹಾಕಿ ಮೇಯರ್ ರೂಲಿಂಗ್ ನೀಡಿದರು.

ಇದನ್ನು ಖಂಡಿಸಿ ಪ್ರತಿಪಕ್ಷ ಸದಸ್ಯರು ಮೇಯರ್ ಪೀಠದ ಮುಂದೆ ಧರಣಿ ನಡೆಸಿದರು. ನಂತರ ಮೇಯರ್ ನಿರ್ಣಯಕ್ಕೆ ವಿರೋಧ ಸೂಚಿಸಿ ಸಭಾತ್ಯಾಗ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.