ADVERTISEMENT

ಮರಳಿ ಬಂದಿದೆ ಒರಾಯನ್ ಶಾಪಿಂಗ್ ಹಬ್ಬ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 19:31 IST
Last Updated 21 ಅಕ್ಟೋಬರ್ 2019, 19:31 IST
ಒರಾಯನ್‌ ಮಾಲ್‌
ಒರಾಯನ್‌ ಮಾಲ್‌   

ರಾಜಾಜಿನಗರದ ಬ್ರಿಗೇಡ್‌ ಗೇಟ್ ವೇ ನಲ್ಲಿರುವ ‘ಒರಾಯನ್ ಮಾಲ್‌’ನಲ್ಲಿ ವಾರ್ಷಿಕ ಶಾಪಿಂಗ್ ಫೆಸ್ಟಿವಲ್ ಆಯೋಜನೆಗೊಂಡಿದೆ. ದೀಪಾವಳಿಗೆ ಆಕರ್ಷಕವಾದ ಕೊಡುಗೆಗಳು, ಅದ್ಭುತ ಬಹುಮಾನಗಳು ಇದರ ವಿಶೇಷ. ಈ ಕೊಡುಗೆಗಳ ಜತೆಗೆ ಈ ಸಲದ ಮಾಲ್‌ ಸಿಂಗಾರ ಕೂಡ ಆಕರ್ಷನೀಯವಾಗಿದೆ. ಹಬ್ಬದ ತಿಂಗಳ ಉತ್ಸಾಹವನ್ನು ಹೆಚ್ಚಿಸುವಂತಿದೆ. ಈ ಹಬ್ಬ ನವೆಂಬರ್ 3ರವರೆಗೆ ನಡೆಯಲಿದೆ.

ಗ್ರಾಹಕರು ವಾರದ ಬಹುಮಾನವಾಗಿ ‘ಹರ‍್ಲೆ ಡೇವಿಡ್ ಸನ್ ಸ್ಟ್ರೀಟ್ 750’ ಹಾಗೂ ದೈನಂದಿನ ಬಹುಮಾನವಾಗಿ ಅತ್ಯಾಧುನಿಕ ‘ಒನ್ ಪ್ಲಸ್ 7’ ಫೋನ್‌ಗಳನ್ನು ಗೆಲ್ಲುವ ಅವಕಾಶವಿದೆ. ಇಲ್ಲಿ ಶಾಪರ್ಸ್‌ಗಳಿಗೆ ತಮ್ಮ ನೆಚ್ಚಿನ ಬ್ರ‍್ಯಾಂಡ್‌ಗಳು ಎಲ್ಲವೂ ಒಂದೆಡೆ ಸಿಗಲಿವೆ. ಇದರ ಜತೆಗೆ ಆಲ್ –ಇನ್ –ಒನ್ ಅನುಭವಕ್ಕಾಗಿ ವಿಶ್ವ ದರ್ಜೆಯ ಆಹಾರ ಹಾಗೂ ವಿರಾಮದ ಅನುಭವಕ್ಕಾಗಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ‘ನಗರದ ಶಾಪಿಂಗ್ ಜಗತ್ತಿಗೆ ನಾವು ಆದ್ಯತೆಯ ಆಯ್ಕೆಯಾಗಿದ್ದೇವೆ’ ಎಂದು ಒರಾಯನ್ ಮಾಲ್‌ನ ಸೀನಿಯರ್ ಜಿಎಂ ವಿಜಯ್ ಕುಮಾರ್ ಭಾಟಿಯಾ ಹೇಳಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT