ವಿಧಾನಸೌಧ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಸ್ತಿ ಮಾಲೀಕರು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ದಂಡ ಹಾಗೂ ಬಡ್ಡಿ ಇಲ್ಲದೆ ಪಾವತಿಸುವ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ.
ಫೆಬ್ರುವರಿಯಲ್ಲಿ ಜಾರಿಯಾಗಿದ್ದ ಒಟಿಎಸ್ ಯೋಜನೆ ಜುಲೈ 31ರಂದು ಕೊನೆಗೊಂಡಿತ್ತು. ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ನಾಗರಿಕರು, ಸಂಘ–ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು. ಅದರಂತೆಯೇ, ಸರ್ಕಾರ ಒಟಿಎಸ್ ಅವಧಿಯನ್ನು ಎರಡು ತಿಂಗಳು ವಿಸ್ತರಿಸಿದೆ.
ಜುಲೈ 31ರ ಅಂತ್ಯಕ್ಕೆ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಯಡಿ ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದ 1.07 ಲಕ್ಷ ಆಸ್ತಿಗಳ ಮಾಲೀಕರು ಪ್ರಯೋಜನ ಪಡೆದುಕೊಂಡು, ₹217.50 ಕೋಟಿ ಪಾವತಿಸಿದ್ದರು. 6,723 ಆಸ್ತಿಗಳ ತೆರಿಗೆಯ ಪುನರ್ ವಿಮರ್ಶೆಯೂ ಸೇರಿ ಒಟ್ಟು ₹380.83 ಕೋಟಿ ಸಂಗ್ರಹವಾಗಿತ್ತು.
2024ರ ಆಗಸ್ಟ್ 1ರಂತೆ 3,04,810 ಆಸ್ತಿಗಳಿಂದ ₹831.53 ಕೋಟಿ ತೆರಿಗೆ ಹಿಂಬಾಕಿ ಪಾವತಿಯಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.