ADVERTISEMENT

ರಾಜ್ಯೋತ್ಸವ: ಜನರಿಗೆ ಉಚಿತ ಪಾನಿಪೂರಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 18:51 IST
Last Updated 1 ನವೆಂಬರ್ 2020, 18:51 IST
ಪಾವನಿ ಚಾಟ್ಸ್ ವತಿಯಿಂದ ಭಾನುವಾರ ಸಾರ್ವಜನಿಕರಿಗೆ ಉಚಿತವಾಗಿ ಪಾನಿಪೂರಿ, ಮಸಾಲಾ ಪೂರಿ ವಿತರಿಸಲಾಯಿತು
ಪಾವನಿ ಚಾಟ್ಸ್ ವತಿಯಿಂದ ಭಾನುವಾರ ಸಾರ್ವಜನಿಕರಿಗೆ ಉಚಿತವಾಗಿ ಪಾನಿಪೂರಿ, ಮಸಾಲಾ ಪೂರಿ ವಿತರಿಸಲಾಯಿತು   

ಬೆಂಗಳೂರು: ನಗರದ ಮಾಗಡಿ ರಸ್ತೆಯಲ್ಲಿನ ಬಿಎಎಲ್‌ ಬಡಾವಣೆಯಲ್ಲಿರುವ ಪಾವನಿ ಚಾಟ್ಸ್ ಮುಂದೆ ಭಾನುವಾರ ಜನರ ಉದ್ದದ ಸರತಿ ಸಾಲು ಕಾಣುತ್ತಿತ್ತು. ಪ್ರತಿ ರಾಜ್ಯೋತ್ಸವದಂದು ಪಾವನಿ ಚಾಟ್ಸ್‌ ಮುಂದೆ ಈ ರೀತಿಯ ಜನ ಜಂಗುಳಿ ಸಾಮಾನ್ಯವಾಗಿರುತ್ತದೆ. ಕಾರಣ, ಕನ್ನಡ ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಅಂದು ಉಚಿತವಾಗಿ ಚಾಟ್ಸ್ ವಿತರಿಸುತ್ತಾರೆ ಬಿ. ಮಂಜುನಾಥ್.

ಸರ್ಕಾರಿ ಹುದ್ದೆ ಬಿಟ್ಟು ‘ಪಾವನಿ ಚಾಟ್ಸ್‌’ ನಡೆಸುತ್ತಿರುವ ಮಂಜುನಾಥ್, ‘ವರ್ಷದ 364 ದಿನವೂ ಹಣಕ್ಕಾಗಿ ದುಡಿಯುತ್ತೇವೆ. ಒಂದು ದಿನ ಸಾರ್ವಜನಿಕರಿಗೆ ಉಚಿತವಾಗಿ ಚಾಟ್ಸ್‌ ವಿತರಿಸಬೇಕು ಎಂಬ ಉದ್ದೇಶ ಇತ್ತು. ಆರು ವರ್ಷಗಳಿಂದ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದೇನೆ. ಪತ್ನಿ ಸೌಮ್ಯಾ ಕೂಡ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ’ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT