ಎ.ಐ ಚಿತ್ರ
ಬೆಂಗಳೂರು: ನಟ ಪವನ್ ಕಲ್ಯಾಣ್ ಅಭಿನಯದ ‘ಒಜಿ’ ಸಿನಿಮಾ ಪ್ರದರ್ಶನಗೊಳುತ್ತಿರುವ ಮಡಿವಾಳದ ಸಂಧ್ಯಾ ಚಿತ್ರಮಂದಿರಕ್ಕೆ ಬುಧವಾರ ರಾತ್ರಿ ಬಂದಿದ್ದ ಅಭಿಮಾನಿಗಳು ಚಿತ್ರದಲ್ಲಿ ಬರುವ ದೃಶ್ಯದಂತೆಯೇ ಪ್ಲಾಸ್ಟಿಕ್ ತಲ್ವಾರ್ ಹಿಡಿದು ಕುಣಿದಿದ್ದರು.
ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಆಗಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಸ್ಥಳಕ್ಕೆ ಬಂದಿದ್ದ ಮಡಿವಾಳ ಠಾಣೆಯ ಪೊಲೀಸರು, ಪ್ಲಾಸ್ಟಿಕ್ ತಲ್ವಾರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಚಿತ್ರಮಂದಿರ ಬಳಿ ಡಿ.ಜೆಗೆ ಅವಕಾಶ ಮಾಡಕೂಡದು ಎಂದು ಪೊಲೀಸರು ಸೂಚಿಸಿ ಮುಚ್ಚಳಿಕೆ ಬರೆಸಿಕೊಂಡಿದ್ದರು. ನಿಯಮ ಮೀರಿ ಡಿ.ಜೆ ಬಳಸಲಾಗಿತ್ತು. ಚಿತ್ರಮಂದಿರದ ವ್ಯವಸ್ಥಾಪಕರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತವಾಗಿ ಎನ್‌ಸಿಆರ್ (ಗಂಭೀರ ಸ್ವರೂಪವಲ್ಲದ ಅಪರಾಧ) ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.