ADVERTISEMENT

ಪೀಣ್ಯ ದಾಸರಹಳ್ಳಿ ಗಣೇಶೋತ್ಸವ: ಪ್ರಸಾದ ಲಡ್ಡು ₹ 5.25 ಲಕ್ಷಕ್ಕೆ ಹರಾಜು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2023, 20:43 IST
Last Updated 11 ಅಕ್ಟೋಬರ್ 2023, 20:43 IST
<div class="paragraphs"><p>ಹರಾಜಿನಲ್ಲಿ ಪಡೆದ ಲಡ್ಡು ಪ್ರಸಾದವನ್ನು ಶಾಸಕ ಎಸ್. ಮುನಿರಾಜು ಅವರು ಎಚ್. ಆರ್. ಪ್ರಕಾಶ್ ಅವರಿಗೆ ತಿನಿಸಿದರು.</p></div>

ಹರಾಜಿನಲ್ಲಿ ಪಡೆದ ಲಡ್ಡು ಪ್ರಸಾದವನ್ನು ಶಾಸಕ ಎಸ್. ಮುನಿರಾಜು ಅವರು ಎಚ್. ಆರ್. ಪ್ರಕಾಶ್ ಅವರಿಗೆ ತಿನಿಸಿದರು.

   

ಪೀಣ್ಯ ದಾಸರಹಳ್ಳಿ: ಹೆಗ್ಗನಹಳ್ಳಿ ಭಾಗದಲ್ಲಿ ದಾಸರಹಳ್ಳಿ ಸಾಮೂಹಿಕ ಗಣೇಶೋತ್ಸವ ಸಮಿತಿಯಿಂದ ನಡೆದ ಗಣೇಶೋತ್ಸವದಲ್ಲಿ 18 ಅಡಿ ಎತ್ತರದ ಗಣೇಶನಿಗೆ ಪ್ರಸಾದವಾಗಿ ಮಾಡಲಾಗಿದ್ದ 15 ಕೆ.ಜಿ. ಲಡ್ಡುವನ್ನು ಬಿಜೆಪಿಯ ದಾಸರಹಳ್ಳಿ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಪ್ರಕಾಶ್ ಅವರು ಹರಾಜಿನಲ್ಲಿ ₹5.25 ಲಕ್ಷಕ್ಕೆ ಖರೀದಿಸಿದರು.

ಪ್ರಸಾದದ ಲಡ್ಡು ಕಳೆದ ವರ್ಷ ₹ 4.25 ಲಕ್ಷಕ್ಕೆ ಹರಾಜು ಆಗಿತ್ತು. ಈ ಹಣವನ್ನು ಮುಂದಿನ ವರ್ಷದ ಸಾಮೂಹಿಕ ಗಣೇಶೋತ್ಸವಕ್ಕೆ ವಿನಿಯೋಗಿಸಲಾಗುವುದು ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ADVERTISEMENT

ನೆಲಗದರನಹಳ್ಳಿ ನಿಸರ್ಗ ಶಾಲೆಯಿಂದ ಪೀಣ್ಯ 2ನೇ ಹಂತ, ಹೆಗ್ಗನಹಳ್ಳಿ ಕ್ರಾಸ್, ಸುಂಕದಕಟ್ಟೆವರೆಗೆ ಗಣೇಶನ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ 25ಕ್ಕೂ ಅಧಿಕ ಗಣೇಶ ಮೂರ್ತಿಗಳು ಇದ್ದವು. ವೀರಗಾಸೆ, ಡೊಳ್ಳು ಕುಣಿತ, ಚಂಡೆ, ಗೊರವರ ಕುಣಿತ, ತಮಟೆ ವಾದ್ಯ, ಗೊಂಬೆ ಕುಣಿತ ಮುಂತಾದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಡಿಜೆ ಸದ್ದಿಗೆ ಯುವಕರು, ಮಹಿಳೆಯರು ಹೆಜ್ಜೆ ಹಾಕಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ದಾಸರಹಳ್ಳಿ ಮಂಡಲ ಅಧ್ಯಕ್ಷ ಸೋಮಶೇಖರ್, ಬಿಜೆಪಿ ಮುಖಂಡರಾದ ಎಚ್.ಎನ್. ಗಂಗಾಧರ್, ಸಪ್ತಗಿರಿ ಆನಂದ್, ವಿನೋದ್ ಗೌಡ, ಭರತ್ ಸೌಂದರ್ಯ, ನಿಸರ್ಗ ಕೆಂಪರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.