ADVERTISEMENT

ಪೀಣ್ಯ ದಾಸರಹಳ್ಳಿ: ಬಿಬಿಎಂ ವಿದ್ಯಾರ್ಥಿನಿ ದೇವಿಶ್ರೀ ಕೊಲೆ– ಆರೋಪಿ ಪರಾರಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 19:44 IST
Last Updated 24 ನವೆಂಬರ್ 2025, 19:44 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಪೀಣ್ಯ ದಾಸರಹಳ್ಳಿ: ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಯುವತಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

ADVERTISEMENT

ನಗರದ ಕಾಲೇಜಿನಲ್ಲಿ ಬಿಬಿಎಂ ಮಾಡುತ್ತಿದ್ದ ದೇವಿಶ್ರೀ (21) ಕೊಲೆಯಾದ ವಿದ್ಯಾರ್ಥಿನಿ. ಮೃತಳ ಪೋಷಕರ ದೂರಿನ ಮೇರೆಗೆ ಪೊಲೀಸರು, ಪ್ರೇಮವರ್ಧನ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ತಮ್ಮೇನಹಳ್ಳಿಯ ಪಿ.ಜಿ.ಯಲ್ಲಿ ವಾಸವಾಗಿದ್ದ ಆಂಧ್ರಪ್ರದೇಶದ ದೇವಿಶ್ರೀ, ಭಾನುವಾರ ಬೆಳಿಗ್ಗೆ ಪ್ರೇಮವರ್ಧನ್ ಜತೆ ಸ್ನೇಹಿತೆಯ ರೂಮ್‌ಗೆ ತೆರಳಿದ್ದಳು. ರಾತ್ರಿ 8 ಗಂಟೆವರೆಗೂ ಅಲ್ಲಿಯೇ ಇದ್ದರು. ಆದರೆ, ಪ್ರೇಮವರ್ಧನ್ ಒಬ್ಬರೇ ರೂಂನಿಂದ ಹೊರಬಂದಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಮಗಳು ಕರೆ ಸ್ವೀಕರಿಸದ ಕಾರಣ ಗಾಬರಿಗೊಂಡ ಪೋಷಕರು, ದೇವಿಶ್ರೀ ಸಹೋದರನಿಗೆ ವಿಷಯ ತಿಳಿಸಿದ್ದಾರೆ. ಸಹೋದರ ಪಿ.ಜಿ ಬಳಿ ಬಂದು ವಿಚಾರಿಸಿದಾಗ ಸ್ನೇಹಿತೆಯ ರೂಮ್‌ಗೆ ಹೋಗಿರುವ ವಿಷಯ ತಿಳಿದು, ಅಲ್ಲಿಗೆ ಭೇಟಿ ನೀಡಿದಾಗ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಶೀಘ್ರ ಬಂಧಿಸಲಾಗುವುದು’ ಎಂದು ಪೊಲೀಸರು ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ, ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.