ADVERTISEMENT

ಸಂಕಷ್ಟದಲ್ಲಿ ಪೀಣ್ಯದ ಕೈಗಾರಿಕೆಗಳು: ಡಿ.ಪಿ. ದಾನಪ್ಪ ಆತಂಕ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 19:52 IST
Last Updated 27 ಫೆಬ್ರುವರಿ 2026, 19:52 IST
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ
ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ   

ಪೀಣ್ಯ ದಾಸರಹಳ್ಳಿ: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಇಕೊ ಗ್ರೀನ್‌ ಸಲ್ಯೂಷನ್ಸ್ ಸಿಸ್ಟಮ್‌, ತ್ಯಾಜ್ಯ ನೀರು ಸಂಸ್ಕರಣೆ ಘಟಕವನ್ನು ಸ್ಥಗಿತಗೊಳಿಸುವುದರಿಂದ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲಿವೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಪಿ. ದಾನಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿರುವ ಅವರು, ‘ಇಕೊ ಗ್ರೀನ್ ಸಲ್ಯೂಷನ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್‌ನ ‘ಸಾಮಾನ್ಯ ತ್ಯಾಜ್ಯ ಸಂಸ್ಕರಣೆ ಘಟಕ’ವನ್ನು (ಸಿಇಟಿಪಿ) ಮಾರ್ಚ್‌ 15ರಿಂದ ಸ್ಥಗಿತಗೊಳಿಸುವುದಾಗಿ ಹೇಳೀದೆ. ಇದರಿಂದ ಪೀಣ್ಯ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳು ಎದುರಿಸುತ್ತಿರುವ ಸಂಕಷ್ಟ ಗಂಭೀರವಾಗಲಿದೆ’ ಎಂದು ಹೇಳಿದ್ದಾರೆ.

‘ಕಾರ್ಯಾಚರಣಾ ಹಾಗೂ ಆಡಳಿತಾತ್ಮಕ ಅಡಚಣೆಗಳ ಕಾರಣದಿಂದ ವಾಣಿಜ್ಯ ತ್ಯಾಜ್ಯ ನೀರನ್ನು ಸ್ವೀಕರಿಸುವುದಿಲ್ಲ, ಶುದ್ದೀಕರಿಸುವುದಿಲ್ಲ’ ಎಂದು ಇಕೊ ಗ್ರೀನ್ ತನ್ನ ಸದಸ್ಯ ಕೈಗಾರಿಕೆಗಳಿಗೆ ತಿಳಿಸಿದೆ. ಈ ಘಟಕದ ಮುಚ್ಚುವುದರಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ  ಕೈಗಾರಿಕೆಗಳಿಗೆ ತ್ಯಾಜ್ಯ ನೀರಿನ ವಿಲೇವಾರಿಯ ಸಂಕಷ್ಟ ಎದುರಾಗಲಿದೆ’ ಎಂದಿದ್ದಾರೆ.

ADVERTISEMENT

‘ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಪರ್ಯಾಯ ಸಿಇಒಟಿಪಿ ಇಲ್ಲ. ತ್ಯಾಜ್ಯ ನೀರನ್ನು ಬಿಡುಗಡೆ ಮಾಡಲು ಕೈಗಾರಿಕೆಗಳಿಗೆ ಯಾವುದೇ ಅಧಿಕೃತ ವ್ಯವಸ್ಥೆಯಿಲ್ಲ. ಕಾನೂನು ಹಾಗೂ ಪರಿಸರ ನಿಯಮಾವಳಿಗಳ ಕಾರಣದಿಂದ ತ್ಯಾಜ್ಯ ನೀರನ್ನು ಒಳಚರಂಡಿ ಅಥವಾ ರಾಜಕಾಲುವೆಗಳಿಗೆ ಬಿಡಲು ಸಾಧ್ಯವಿಲ್ಲ. ಹೀಗಾಗಿ ಸಮಸ್ಯೆಯಾಗಲಿದೆ. ಈ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ‘ಸರ್ಫೇಸ್ ಟ್ರೇಟ್‌ಮೆಂಟ್’ ಕೈಗಾರಿಕೆಗಳು ಮುಚ್ಚುವ ಭೀತಿ ಎದುರಾಗಿದೆ. ಇದರಿಂದ ಆರ್ಥಿಕ ನಷ್ಟ ಹಾಗೂ ಸಾವಿರಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.