– ಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ಬೆಂಗಳೂರು: ದೇಶದ ಗಡಿಯಲ್ಲಿ ಉದ್ಭವಿಸಿರುವ ಸಂಘರ್ಷದ ಸನ್ನಿವೇಶವನ್ನು ಬಳಸಿಕೊಂಡು ಸೈಬರ್ ಕಳ್ಳರು ವಂಚನೆ ಎಸಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರು ಮನವಿ ಮಾಡಿದ್ದಾರೆ.
ಸುಳ್ಳು ಸುದ್ದಿ, ಫಿಶಿಂಗ್, ನಕಲಿ ಲಿಂಕ್‌ಗಳ ಮೂಲಕ ಸೈಬರ್ ವಂಚಕರು ವಂಚನೆ ನಡೆಸುವ ಸಾಧ್ಯತೆಗಳು ಇವೆ ಎಂದು ಅವರು ಎಚ್ಚರಿಸಿದ್ದಾರೆ.
ತಮ್ಮ ವಾಟ್ಸ್‌ಆ್ಯಪ್ ಖಾತೆಗೆ ಎಪಿಕೆ ಫೈಲ್ ಬಂದರೆ ಅದನ್ನು ತೆರೆಯುವುದು ಬೇಡ. ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಅಧಿಕೃತವಾದ ಪ್ಲೇ–ಸ್ಟೋರ್ ಅನ್ನೇ ಬಳಸಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಸೇನೆಗೆ ತುರ್ತಾಗಿ ನೇಮಕಾತಿ ನಡೆಸಲಾಗುತ್ತಿದೆ ಎಂದು ನಕಲಿ ಲಿಂಕ್ ಕಳುಹಿಸಿ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಕದಿಯುವ ಸಾಧ್ಯತೆ ಇದೆ. ನಕಲಿ ಲಿಂಕ್‌ಗಳು ಬಂದರೆ ತಕ್ಷಣವೇ ಡಿಲಿಟ್ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಸೈಬರ್ ದಾಳಿಗೆ ಒಳಗಾದರೆ ಆತಂಕ ಪಡುವುದು ಬೇಡ. ತಕ್ಷಣವೇ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.