ADVERTISEMENT

ಆರೋಪಿ ಮೂಳೆ ಮುರಿತ: ಚಿಕಿತ್ಸೆಗೆ ಕೋರ್ಟ್ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 20:44 IST
Last Updated 23 ಜುಲೈ 2025, 20:44 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ಕಿರಣ್‍ ಮೇಲೆ ಪೊಲೀಸರು ತೀವ್ರ ಹಲ್ಲೆ ನಡೆಸಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಸಂಬಂಧ ಹೈಕೋರ್ಟ್‍ನ ಸೂಚನೆಯಂತೆ ವಿಚಾರಣೆ ನಡೆಸಿದ ನಗರದ 29ನೇ ಎಸಿಎಂಎಂ ನ್ಯಾಯಾಲಯವು ಕಿರಣ್‍ಗೆ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಆದೇಶಿಸಿದೆ

‘ಪ್ರಕರಣದ ತನಿಖಾಧಿಕಾರಿ ಅವರು ತಮ್ಮ ಕಕ್ಷಿದಾರರಿಗೆ ತೊಂದರೆ ಕೊಟ್ಟಿಲ್ಲ. ಇತರೆ ಪೊಲೀಸರು ವಿಚಾರಣೆಯ ನೆಪದಲ್ಲಿ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ. ಇದರಿಂದ ಕಿರಣ್‍ನ ಪಾದದ ಮೂಳೆ ಮುರಿದಿದೆ. ಆದ್ದರಿಂದ ಕಿರಣ್‍ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು’ ಎಂದು ಕಿರಣ್ ಪರ ವಕೀಲರು ನ್ಯಾಯಾಧೀಶರಲ್ಲಿ ಕೋರಿದರು.

ADVERTISEMENT

‘ತನಿಖಾಧಿಕಾರಿ ಹೊರತುಪಡಿಸಿ ಇತರ ಸಿಬ್ಬಂದಿ ಕಿರಣ್‍ನನ್ನು ವಿಚಾರಣೆ ನಡೆಸುವಂತಿಲ್ಲ. ಕಿರಣ್‍ಗೆ ಹೆಚ್ಚಿನ ಚಿಕಿತ್ಸೆ ಕೊಡಿಸಬೇಕು’ ಎಂದು ನ್ಯಾಯಾಲಯವು ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.