ADVERTISEMENT

ಗಣೇಶ ಹಬ್ಬದ ಹಿನ್ನೆಲೆ ಕಟ್ಟೆಚ್ಚರ: ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 19:00 IST
Last Updated 24 ಆಗಸ್ಟ್ 2022, 19:00 IST
ರೌಡಿಶೀಟರ್‌ ಮನೆಯಲ್ಲಿ ಪೊಲೀಸರ ಶೋಧ
ರೌಡಿಶೀಟರ್‌ ಮನೆಯಲ್ಲಿ ಪೊಲೀಸರ ಶೋಧ   

ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ರೌಡಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.

ಪಶ್ಚಿಮ ವಿಭಾಗದ ವಿವಿಧ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ರೌಡಿಗಳ ಮನೆಗಳ ದಾಳಿ ನಡೆಸಿ ರೌಡಿ ಚಟುವಟಿಕೆ ನಡೆಸುತ್ತಿದ್ದವರಿಗೆ ಬಿಸಿಮುಟ್ಟಿಸಿದ್ದಾರೆ.

ಮೂರೂ ಉಪ ವಿಭಾಗಗಳಲ್ಲಿ 160 ರೌಡಿಶೀಟರ್‌ ಮನೆಗಳ ದಾಳಿ ನಡೆಸಿ ಮಾರಕಾಸ್ತ್ರಗಳಿಗೆ ಶೋಧ ನಡೆಸಲಾಯಿತು. ಅದರಲ್ಲಿ 100 ಮಂದಿ ರೌಡಿಗಳು ಪತ್ತೆಯಾಗಿದ್ದು, 60 ಮಂದಿ ತಲೆಮರೆಸಿಕೊಂಡಿದ್ದಾರೆ. ಈಗಲೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ 32 ಮಂದಿಯನ್ನು ಪೊಲೀಸ್‌ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಜೈಲಿನಿಂದ ಹೊರಬಂದಿದ್ದ ಜಿಬ್ರಾನ್ ಎಂಬುವನ ಮನೆಯಲ್ಲಿ ಡ್ರ್ಯಾಗರ್ ಸಿಕ್ಕಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.