ADVERTISEMENT

ಉಚಿತ ಹಾಲು ವಿತರಣೆಯಲ್ಲಿ ಮತ ಬ್ಯಾಂಕ್‌ ರಾಜಕಾರಣ: ಎಎಪಿ ಮುಖಂಡ ಆರೋಪ

ಎಎಪಿ ರಾಜಾಜಿನಗರ ಕ್ಷೇತ್ರ ಘಟಕ ಆರೋಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 10:22 IST
Last Updated 16 ಏಪ್ರಿಲ್ 2020, 10:22 IST
   

ಬೆಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರವು ಕಡು ಬಡವರಿಗೆ, ವಲಸೆ ಕಾರ್ಮಿಕರಿಗೆ, ನಿರ್ಗತಿಕರಿಗೆ ವಿತರಿಸಲು ನಂದಿನಿ ಹಾಲನ್ನು ಉಚಿತವಾಗಿ ಪೂರೈಸುತ್ತಿದೆ. ಆದರೆ ಕೆಲವು ಶಾಸಕರು, ಬಿಬಿಎಂಪಿ ಸದಸ್ಯರು ಇದನ್ನು ವೋಟ್ ಬ್ಯಾಂಕ್ ಗಟ್ಟಿಮಾಡಿಕೊಳ್ಳಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ

’ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸರ್ಕಾರ ನೀಡುತ್ತಿರುವ ಉಚಿತ ಹಾಲನ್ನು ಸ್ಥಳೀಯ ಬಿಜೆಪಿ ಮುಖಂಡರು ಕ್ಷೇತ್ರದ ಮತದಾರರಿಗೆ ಮಾತ್ರ ನೀಡುತ್ತಿದ್ದಾರೆ. ಬಸವೇಶ್ವರ ನಗರ ವಾರ್ಡಿನ ಪಾಲಿಕೆ ಸದಸ್ಯೆ ಉಮಾವತಿ ಅವರ ಪತಿ ಪದ್ಮರಾಜ್ ಅವರು ಮತದಾರರ ಗುರುತಿನ ಚೀಟಿ ತೋರಿಸುವವರಿಗೆ ಮಾತ್ರ ಹಾಲನ್ನು ಉಚಿತವಾಗಿ ಹಂಚುತ್ತಿದ್ದಾರೆ’ ಎಂದು ಎಎಪಿ ರಾಜಾಜಿನಗರ ಕ್ಷೇತ್ರ ಘಟಕದ ಅಧ್ಯಕ್ಷರಾದ ಗುರುಮೂರ್ತಿ ದೂರಿದ್ದಾರೆ.

ಹಾಲು ವಿತರಣೆಯಲ್ಲೀ ರಾಜಕೀಯ ಮಾಡುವವರ ವಿರುದ್ಧ ಸರ್ಕಾರವು ಕ್ರಮ ಜರುಗಿಸಬೇಕು. ಹಾಲು ವಿತರಣೆಯಲ್ಲಿ ಪಕ್ಷಪಾತಕ್ಕೆ ಅವಕಾಶ ಸಿಗದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.