ADVERTISEMENT

ಅಶ್ಲೀಲ ವಿಡಿಯೊ ಕರೆ; ಇನ್‌ಸ್ಪೆಕ್ಟರ್‌ಗೆ ಬ್ಲ್ಯಾಕ್‌ಮೇಲ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 20:06 IST
Last Updated 11 ಡಿಸೆಂಬರ್ 2020, 20:06 IST

ಬೆಂಗಳೂರು: ನಗರದ ಇನ್‌ಸ್ಪೆಕ್ಟರೊಬ್ಬರಿಗೆ ಅಶ್ಲೀಲ ವಿಡಿಯೊ ಕರೆ ಮಾಡಿದ್ದ ಯುವತಿಯೊಬ್ಬರು, ಅದರ ಸ್ಕ್ರಿನ್‌ಶಾರ್ಟ್ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವ ಬಗ್ಗೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೃತ್ಯದ ಬಗ್ಗೆ ಇನ್‌ಸ್ಪೆಕ್ಟರ್ ದೂರು ನೀಡಿದ್ದಾರೆ. ಅಪರಿಚಿತ ಯುವತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ಇನ್‌ಸ್ಪೆಕ್ಟರ್ ಅವರು ಖಾತೆ ಹೊಂದಿದ್ದಾರೆ. ಅದೇ ಖಾತೆಗೆ ಡಿ. 8ರಂದು ವಿಡಿಯೊ ಕರೆ ಮಾಡಿದ್ದ ಯುವತಿ, ನಗ್ನವಾಗಿ ಕಾಣಿಸಿಕೊಂಡು ಅಶ್ಲೀಲವಾಗಿ ವರ್ತಿಸಿದ್ದರು. ಅದನ್ನು ನೋಡಿದ್ದ ಇನ್‌ಸ್ಪೆಕ್ಟರ್, ಕೂಡಲೇ ಕರೆ ಕಡಿತಗೊಳಿಸಿದ್ದರು.’

ADVERTISEMENT

‘ಕೆಲ ನಿಮಿಷಗಳ ನಂತರ ವಿಡಿಯೊ ಕರೆಯ ಸ್ಕ್ರಿನ್‌ ಶಾರ್ಟ್‌ಗಳನ್ನು ಇನ್‌ಸ್ಪೆಕ್ಟರ್‌ಗೆ ಕಳುಹಿಸಿದ್ದ ಯುವತಿ, ₹ 11 ಸಾವಿರ ನೀಡುವಂತೆ ಹೇಳಿದ್ದರು. ಹಣ ನೀಡದಿದ್ದರೆ, ವಿಡಿಯೊ ಕರೆ ಸ್ಕ್ರಿನ್‌ಶಾರ್ಟ್‌ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದರು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಯುವತಿಗೆ ಹಣ ನೀಡಲು ನಿರಾಕರಿಸಿದ ಇನ್‌ಸ್ಪೆಕ್ಟರ್‌ ಠಾಣೆಗೆ ದೂರು ನೀಡಿದ್ದಾರೆ. ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಇನ್‌ಸ್ಪೆಕ್ಟರ್‌ ಅವರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಅಪರಿಚಿತ ಯುವತಿ ಯಾರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.