ADVERTISEMENT

ಗುಂಡಿಮುಕ್ತ ರಸ್ತೆ: ನಾಗರಿಕರಿಗೆ ‘ಎಫ್‌ಎಂಎಸ್‌’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 19:26 IST
Last Updated 5 ಡಿಸೆಂಬರ್ 2022, 19:26 IST
   

ಬೆಂಗಳೂರು: ನಗರದಲ್ಲಿ ರಸ್ತೆಗುಂಡಿಗಳಿದ್ದರೆಅದನ್ನು ಕ್ಷಿಪ್ರಗತಿಯಲ್ಲಿ ದುರಸ್ತಿಗೊಳಿಸಲುಬಿಬಿಎಂಪಿ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಅನ್ನು ನಾಗರಿಕರಿಗೆ ಪರಿಚಯಿಸುತ್ತಿದೆ.

ಬಿಬಿಎಂಪಿವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳು ಕಂಡುಬಂದರೆ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ ಮೂಲಕ ನಾಗರಿಕರು ದೂರು ಸಲ್ಲಿಸಬಹುದು. ಜಿಐಎಸ್‌ ಆಧಾರಿತವಾದ ಚಿತ್ರವನ್ನು ಇದರಲ್ಲಿ ಅಪ್‌ಲೋಡ್‌ ಮಾಡಬೇಕು. ಇದನ್ನು ಸಂಬಂಧಪಟ್ಟ ಎಂಜಿನಿಯರ್‌ಗಳು ಪರಿಶೀಲಿಸುತ್ತಾರೆ. ಸ್ಥಳಕ್ಕೆ ಹೋಗಿಅದರದುರಸ್ತಿ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ. ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನೂ ಚಿತ್ರ ಸಹಿತ ಮಾಹಿತಿಯನ್ನು ಆ‍್ಯಪ್‌ನಲ್ಲೇ ಅಪ್‌ಲೋಡ್‌ ಮಾಡುತ್ತಾರೆ ಎಂದುಬಿಬಿಎಂಪಿಯಹಣಕಾಸು ವಿಭಾಗದವಿಶೇಷ ಆಯುಕ್ತ ಜಯರಾಮ್‌ರಾಯಪುರತಿಳಿಸಿದರು.

ಬಿಬಿಎಂಪಿ ‘ಫಿಕ್ಸ್‌ ಮೈ ಸ್ಟ್ರೀಟ್‌’ ಆ್ಯಪ್‌ಡಿಸೆಂಬರ್‌ 15ರಿಂದ ನಾಗರಿಕರಿಗೆ ಲಭ್ಯವಾಗುತ್ತದೆ ಎಂದರು.

ADVERTISEMENT

ಬಿಬಿಎಂಪಿವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಲು ಹಾಗೂ ದುರಸ್ತಿ ಮಾಡಲು ‘ಫಿಕ್ಸ್‌ ಮೈ ಸ್ಟ್ರೀಟ್‌’ (ಎಫ್ಎಂಎಸ್‌) ಸಾಫ್ಟ್‌ವೇರ್‌ ಚಾಲನೆಯಲ್ಲಿದೆ.ಇದುಬಿಬಿಎಂಪಿಯಎಂಜಿನಿಯರ್‌ಗಳ ಮಟ್ಟದಲ್ಲಿದೆ. ಪ್ರಧಾನ ಎಂಜಿನಿಯರ್‌ಸಿ.ಎಸ್‌. ಪ್ರಹ್ಲಾದ್‌ ನೇತೃತ್ವದ ಕಾರ್ಯಪಡೆ ಇದರ ಮೇಲ್ವಿಚಾರಣೆ ನಡೆಸುತ್ತಿದೆ.

ಪ್ರತಿ ವಲಯದ ಎಂಜಿನಿಯರ್‌ಗಳೊಂದಿಗೆ ಸಮನ್ವಯ ಸಾಧಿಸಿ, ದುರಸ್ತಿಗೆಬೇಕಿರುವಸಾಮಗ್ರಿಗಳಖರೀದಿ ಹಾಗೂ ವಿತರಣೆಯ ಜವಾಬ್ದಾರಿಯನ್ನು ಈ ಕಾರ್ಯಪಡೆ ಹೊಂದಿದೆ. ಎಫ್‌ಎಂಎಸ್‌ ಮೂಲಕ ಕಾರ್ಯಪಡೆಯಿಂದ ಆದೇಶ ಪಡೆದ ಕೂಡಲೆ 27 ವಲಯವಾರು ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ರಸ್ತೆ ಮೂಲಸೌಕರ್ಯದ ಕಾರ್ಯಪಾಲಕ ಎಂಜಿನಿಯರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ರಸ್ತೆ ಗುಂಡಿಗಳ ದುರಸ್ತಿ ಕಾಮಗಾರಿಯ ವಿವರವನ್ನುಎಫ್ಎಂಎಸ್ಮೂಲಕ ಅಂದೇ ವರದಿ ಮಾಡುತ್ತಿದ್ದಾರೆ. ಇದೀಗ ನಾಗರಿಕರು ಈ ಆ‍್ಯಪ್‌ ಬಳಸಿ ತಮ್ಮ ದೂರುಗಳನ್ನು ದಾಖಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.