ADVERTISEMENT

ಬೆಂಗಳೂರು: ಕುಂಬಳಗೋಡು ವ್ಯಾಪ್ತಿಯಲ್ಲಿ ಇಂದು ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 23:40 IST
Last Updated 17 ಸೆಪ್ಟೆಂಬರ್ 2024, 23:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕುಂಬಳಗೋಡು ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಬುಧವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಕೇಂದ್ರದ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು: ಭೀಮನ ಕುಪ್ಪೆ ಗ್ರಾಮ, ವಿನಾಯಕನಗರ, ಫಿಶ್ ಫ್ಯಾಕ್ಟರಿ, ಗೇರುಪಾಳ್ಯ ಒಂದನೇ ಮೈಲಿಕಲ್ಲು, ಅಂಚೆಪಾಳ್ಯ, ಪ್ರಾವಿಡೆಂಟ್, ಹೊಸ ಪಾಳ್ಯ, ಕಣಮಿಣಕಿ, ಕುಂಬಳಗೋಡು ಕೈಗಾರಿಕಾ ಪ್ರದೇಶ, ಕಂಬಿಪುರ, ಕಾರುಬೆಲೆ, ತಗಚಗುಪ್ಪೆ, ಪಿಂಟೋ ಬಾರೆ, ಗಡಿಮಾವು, ದೇವಗೆರೆ, ಗಂಗಸಂದ್ರ, ಆನೆಪಾಳ್ಯ, ದೊಡ್ಡಿಪಾಳ್ಯ, ಗೋಣಿಪುರ, ಗೊಲ್ಲಹಳ್ಳಿ, ತಿಪ್ಪೂರು,‌ ಚಿನ್ನಕುರ್ಚಿ, ಬಾಬುಸಾಬ್ ಪಾಳ್ಯ, ದೊಡ್ಡಬೆಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT