ADVERTISEMENT

ಇಂದಿನಿಂದ ವಿವಿಧೆಡೆ ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 20:05 IST
Last Updated 28 ಸೆಪ್ಟೆಂಬರ್ 2020, 20:05 IST

ಬೆಂಗಳೂರು: ಬೆಸ್ಕಾಂನ ವಿವಿಧ ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯನಿರ್ವಹಣೆ ಕೈಗೆತ್ತಿಕೊಂಡಿರುವುದರಿಂದ ಸೆ.29ರಿಂದ ಅ.7ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಆಗಲಿದೆ ಪ್ರಕಟಣೆ ತಿಳಿಸಿದೆ.

ವ್ಯತ್ಯಯವಾಗುವ ಸ್ಥಳಗಳು: ಸೆ.29ರಂದು ಸಾಯಿ ಮಾನ್ಷನ್, ಮಣಿಕಂಠ ಗಂಗಮ್ಮ ದೇವಸ್ಥಾನ, ಬಿಎಂಟಿಸಿ ಡಿಪೊ, 30ರಂದು ಕೆಎಎಸ್ ಬಡಾವಣೆ, ನಂಜಪ್ಪ ಬಡಾವಣೆ, ಬಿಟಿಎಂ 2ನೇ ಹಂತ, ನಾರಾಯಣ ನಗರ, ಡಾಕ್ಟರ್ಸ್ ಕಾಲೊನಿ, ಮಣಿಪಾಲ್ ಆಸ್ಪತ್ರೆ, ನಾಯ್ಡು ಟಿಸಿ, ಅ.1ರಂದು ಮೈಕೊ ಬಡಾವಣೆ ಮತ್ತು ಬಿಟಿಎಂ 2ನೇ ಹಂತ, ವಿದ್ಯಾಪೀಠ, ಅಜ್ಜಿ ಮನೆ, ಶ್ರೀಗುರು ಅಪಾರ್ಟ್‍ಮೆಂಟ್, 2ರಂದು ಚನ್ನಮ್ಮನ ಕೆರೆ ಪಾರ್ಕ್, ಗಣೇಶ ಅಪಾರ್ಟ್‍ಮೆಂಟ್, 6ರಂದು ಆಲದ ಮರ, ತ್ಯಾಗರಾಜನಗರ 9ನೇ ಕ್ರಾಸ್, 7ರಂದು ಮುತ್ತು ಡೇರಿ, ದತ್ತಾತ್ರೇಯ, ಮಾಲ್ ಆಫೀಸ್.

ಪರಿಹಾರಧನಕ್ಕೆ ಹೆಚ್ಚುವರಿ ಬ್ಯಾಂಕ್ ಖಾತೆ ದಾಖಲಿಸಿ

ADVERTISEMENT

ಬೆಂಗಳೂರು: ಸರ್ಕಾರದ ವತಿಯಿಂದ ಲಾಕ್‍ಡೌನ್ ಪರಿಹಾರವಾಗಿ ಐದು ಸಾವಿರ ಪರಿಹಾರಧನ ಪಡೆಯಲು ಆಟೊ, ಟ್ಯಾಕ್ಸಿ ಚಾಲಕರು ತಮ್ಮ ಹೆಚ್ಚುವರಿ ಬ್ಯಾಂಕ್ ಖಾತೆಯ ಮಾಹಿತಿ ದಾಖಲಿಸುವಂತೆ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಹಾರಧನಕ್ಕೆ ಅರ್ಜಿ ಸಲ್ಲಿಸಿದ್ದವರಲ್ಲಿ 24,593 ಫಲಾನುಭವಿಗಳ ಬ್ಯಾಂಕ್ ಖಾತೆ ನಿಷ್ಕ್ರಿಯ ಹಾಗೂ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಆಗದಿರುವಂತಹ ತಾಂತ್ರಿಕ ಸಮಸ್ಯೆಗಳಿಂದ ಪರಿಹಾರ ಧನ ವಿತರಣೆಯಾಗಿಲ್ಲ. ಹಾಗಾಗಿ, ಸೇವಾ ಸಿಂಧು ಪೋರ್ಟಲ್‍ನಲ್ಲಿ ಹೆಚ್ಚುವರಿ ಬ್ಯಾಂಕ್ ಖಾತೆಯ ಮಾಹಿತಿ ದಾಖಲಿಸುವಂತೆ ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.