ADVERTISEMENT

ಲಾಲ್‌ಬಾಗ್‌ ರಸ್ತೆ ಒಳ ಚರಂಡಿ ದುರಸ್ತಿ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 20:30 IST
Last Updated 28 ನವೆಂಬರ್ 2018, 20:30 IST
ಉಕ್ಕಿ ಹರಿಯುತ್ತಿರುವ ಮ್ಯಾನ್‌ಹೋಲ್‌
ಉಕ್ಕಿ ಹರಿಯುತ್ತಿರುವ ಮ್ಯಾನ್‌ಹೋಲ್‌   

ಬೆಂಗಳೂರು: ಲಾಲ್‌ಬಾಗ್‌ನ ಮುಖ್ಯದ್ವಾರದ ಮುಂಭಾಗದ ಒಳಚರಂಡಿ ದುರಸ್ತಿ ಯಾಗಿದೆ. ಇದರಿಂ ದಹರಿಯುತ್ತಿದ್ದ ಚರಂಡಿ ನೀರು ನಿಂತಿದ್ದು, ಸಾರ್ವಜನಿಕರು ನಿರಾಳವಾಗಿ ಓಡಾಡುವಂತಾಗಿದೆ.

ಒಳಚರಂಡಿ ನೀರು ಹರಿಯುತ್ತಿರುವುದರ ಕುರಿತು ಮಂಗಳವಾರ ‘ಲಾಲ್‌ಬಾಗ್‌ ರಸ್ತೆಗೆ ಚರಂಡಿ ನೀರು’ ಶೀರ್ಷಿಕೆಯಡಿ ‘ಪ್ರಜಾವಾಣಿ’ ವರದಿಯೊಂದನ್ನು ಪ್ರಕಟಿಸಿತ್ತು. ಇದರಿಂದಎಚ್ಚೆತ್ತ ಅಧಿಕಾರಿಗಳು ಚರಂಡಿಯನ್ನು ದುರಸ್ತಿ ಮಾಡಿದ್ದಾರೆ.

‘ಜಲಮಂಡಳಿಯ ಮುಖ್ಯ ಒಳಚರಂಡಿ ಮಾರ್ಗ ಕಟ್ಟಿಕೊಂಡಿದ್ದರಿಂದ ಈ ಸಮಸ್ಯೆ ಉಂಟಾಗಿದ್ದು, ಮುಖ್ಯ ರಸ್ತೆಯಲ್ಲಿ ಕೊಳಚೆ ನೀರು ಮೂರು ದಿನಗಳಿಂದ ರಭಸವಾಗಿ ಹರಿಯುತ್ತಿದ್ದರೂ ಅಧಿಕಾರಿಗಳು ಇತ್ತ ಬಾರದಿರುವುದು, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳದಿರುವುದು ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಅಕ್ಕಪಕ್ಕದ ಮಳಿ ಗೆಗಳ ಮಾಲೀಕರು ಹಾಗೂನಡಿಗೆದಾರರಸಂಘದ ಅಧ್ಯಕ್ಷ ಕೆಂಪಣ್ಣ ಆಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.