ADVERTISEMENT

ದೆವ್ವ ಬಂತು ದೆವ್ವ: ಪ್ರ್ಯಾಂಕ್‌ ಮಾಡಲು ಹೋಗಿ ಪೊಲೀಸರ ಅತಿಥಿಯಾದ್ರು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 11:29 IST
Last Updated 11 ನವೆಂಬರ್ 2019, 11:29 IST
ಪ್ರ್ಯಾಂಕ್‌ ವಿಡಿಯೊ
ಪ್ರ್ಯಾಂಕ್‌ ವಿಡಿಯೊ   

ಬೆಂಗಳೂರು: ಭಿನ್ನ ವೇಷಗಳನ್ನು ತೊಟ್ಟು, ಬೇರೆ ಬೇರೆ ಕಥೆಗಳನ್ನು ಹೇಳಿಕೊಂಡು ಪ್ರ್ಯಾಂಕ್‌ ಮಾಡುವುದನ್ನು ಟೆಲಿವಿಷನ್‌ಗಳಲ್ಲಿ ನೀವು ನೋಡಿರಬಹುದು. ಅದೇ ರೀತಿ ದೆವ್ವದ ವೇಷ ತೊಟ್ಟು ಪ್ರ್ಯಾಂಕ್‌ ಮಾಡಲು ಹೋಗಿದ್ದ ಯುವಕರು ಈಗ ಕಂಬಿ ಎಣಿಸುತ್ತಿದ್ದಾರೆ.

ಹೌದು, ಭಾನುವಾರ ಮಧ್ಯರಾತ್ರಿ 2.30ರ ಸುಮಾರಿಗೆ ಕೆಲವು ಯುವಕರುಯಶವಂತಪುರದ ಶರೀಫ್ ನಗರದಲ್ಲಿ ದೆವ್ವದ ರೀತಿ ಮುಖವಾಡ ಹಾಕಿ ಸಾರ್ವಜನಿಕನ್ನು ಹೆದರಿಸುತ್ತಿದ್ದರು.

ಆಟೊದವರನ್ನು, ದ್ವಿಚಕ್ರ ವಾಹನ ಸವಾರರನ್ನು ಅಡ್ಡ ಹಾಕಿ,ಒಬ್ಬ ಸತ್ತಂತೆ ನಟಿಸಿದರೆ ಮತ್ತೊಬ್ಬ ದೆವ್ವದ ವೇಷ ತೊಟ್ಟು ಭಯ ಪಡಿಸುತ್ತಿದ್ದರು.ಇದರಿಂದಭಯಭೀತರಾದ ಜನ ಪೊಲೀಸರಿಗೆ ಕರೆ ಮಾಡಿ, ವಿಷಯ ತಿಳಿಸಿದರು.

ADVERTISEMENT

‘ಸಡನ್ ಆಗಿ ದೆವ್ವದ ರೀತಿ ಅಡ್ಡ ಬರೋದರಿಂದ ಹೃದಯ ಕಾಯಿಲೆ ಇರುವವರಿಗೆ ತೊಂದರೆ ಆಗುತ್ತದೆ. ಅದಲ್ಲದೆ,ಈದ್ ಮಿಲಾದ್ , ಟಿಪ್ಪು ಜಯಂತಿ ಇತ್ತು. ಶನಿವಾರವಷ್ಟೇ ಅಯೋಧ್ಯೆ ತೀರ್ಪು ಬಂದಿತ್ತು. ಇದೆಲ್ಲದರಿಂದ ಭಾನುವಾರ ತುಂಬಾ ಸೂಕ್ಷ್ಮದಿನವಾಗಿತ್ತು. ಹೀಗಾಗಿ ಅವರನ್ನು ತಕ್ಷಣ ವಶಕ್ಕೆ ಪಡೆಯಲಾಯಿತು’ ಎಂದು ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹೇಳಿದರು.

‘ವಶಕ್ಕೆ ಪಡೆದ ಯುವಕರನ್ನು ವಿಚಾರಿಸಿದಾಗಯೂಟ್ಯೂಬ್ , ಟಿಕ್‌ಟಾಕ್‌ಗಾಗಿ ಈ ರೀತಿ ಪ್ರ್ಯಾಂಕ್‌ ವಿಡಿಯೊ ಮಾಡುತ್ತಿರುವುದಾಗಿ ಹೇಳಿದರು.ಶಾನ್ ಮಲ್ಲಿಕ್, ನವೀದ್, ಸಜೀಲ್ ಮಹಮದ್, ಮಹಮದ್ ಅಕ್ಯೂಬ್, ಸಾಕಿಬ್, ಸೈಯದ್ ನಬೀಲ್, ಯೂಸಫ್ ಅಹಮದ್ ಒಟ್ಟು ಏಳು ಮಂದಿಯನ್ನು ಬಂಧಿಸಿದ್ದೇವೆ. ಹುಡುಗರು ಎಂಜಿನಿಯರಿಂಗ್‌, ಬಿಬಿಎಂ, ಬಿಎಸ್‌ಸಿ ಅಗ್ರಿಕಲ್ಚರ್ ಓದುತ್ತಿದ್ದಾರೆ.ಎಚ್ಚರಿಕೆ ಕೊಟ್ಟು ಜಾಮೀನಿನಮೇಲೆ ಬಿಟ್ಟು ಕಳಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.