ADVERTISEMENT

ಪ್ರತೀಕ್ ಪ್ರಕರಣ: ವರದಿ ನೀಡಲು ಎಸ್‌.ಪಿಗೆ ಸೂಚನೆ: ನಾಗಲಕ್ಷ್ಮೀ ಚೌಧರಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 15:38 IST
Last Updated 18 ಜುಲೈ 2025, 15:38 IST
ನಾಗಲಕ್ಷ್ಮೀ ಚೌಧರಿ
ನಾಗಲಕ್ಷ್ಮೀ ಚೌಧರಿ   

ಬೆಂಗಳೂರು: ಪ್ರತೀಕ್ ಚೌವ್ಹಾಣ್‌ ಹಾಗೂ ಕುಟುಂಬ ಸದಸ್ಯರ ವಿರುದ್ಧ ಮಹಾರಾಷ್ಟ್ರದ ದೇಗಲೂರ ತಾಲ್ಲೂಕಿನ ಸೇವಾದಾಸ ನಗರ ತಾಂಡಾದ ಯುವತಿಯೊಬ್ಬರು ನೀಡಿರುವ ದೂರು ಸಂಬಂಧ ಕಾನೂನು ಕ್ರಮ ಜರುಗಿಸಿ, ಕೈಗೊಂಡ ವರದಿಯನ್ನು ಹದಿನೈದು ದಿನಗಳೊಳಗೆ ಸಲ್ಲಿಸುವಂತೆ ಬೀದರ್ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಮಹಿಳೆ ಮತ್ತು ಅವರ ಕುಟುಂಬದವರು ನನ್ನನ್ನು ಭೇಟಿ ಮಾಡಿ, ದೂರು ನೀಡಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಯುವಕ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ, ಯುವತಿಗೆ ಸೂಕ್ತ ರಕ್ಷಣೆ ನೀಡುವಂತೆ ಎಸ್‌.ಪಿಗೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT