ADVERTISEMENT

ಪ್ರೆಸಿಡೆನ್ಸಿ ವಿ.ವಿ: ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:47 IST
Last Updated 19 ನವೆಂಬರ್ 2020, 20:47 IST
ಕನ್ನಡ ರಾಜ್ಯೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು
ಕನ್ನಡ ರಾಜ್ಯೋತ್ಸವದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು   

ಬೆಂಗಳೂರು: ರಾಜಾನುಕುಂಟೆ ಇಟ್ಗಲ್‌ಪುರದಲ್ಲಿರುವ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸುಪ್ರತಿಭಾ ಕಾರಂಜಿ
ಕನ್ನಡ ಸಂಘದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.

ಮುಖ್ಯ ಅತಿಥಿ ಡಾ. ಶೀಲಾ ಮಳೀಮಠ ಮಾತನಾಡಿ, ‘ಕನ್ನಡ ಬೆಳೆಯಬೇಕಾದರೆ ಮೂರು ಚಿಕಿತ್ಸೆಗಳು ಅಗತ್ಯ. ಒಂದು ಆರ್ಥಿಕ ಚಿಕಿತ್ಸೆ, ಎರಡು ಸಾಮಾಜಿಕ ಚಿಕಿತ್ಸೆ, ಮೂರು ಸಂಘಟನಾತ್ಮಕ ಚಿಕಿತ್ಸೆ‘ ಎಂದರು.

ಗಾಯಕ ಕಡಬಗೆರೆ ಮುನಿರಾಜು ವಿಶೇಷ ಆಹ್ವಾನಿತರಾಗಿದ್ದರು.ಜನಪದ ಗಾಯಕಿ ಎಲ್ಲಮ್ಮ, ಗಂಗಮ್ಮ ಹಾಗೂ ರೈತ ಹೋರಾಟಗಾರ ವಿಜಯಕುಮಾರ್ ಅವರನ್ನುಸನ್ಮಾನಿಸಲಾಯಿತು.

ADVERTISEMENT

ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೀವ್ ಮ್ಯಾಸಿ, ಡಾ. ಸುರೇಂದ್ರ, ಕುಲಸಚಿವ ಡಾ. ಬೀರಾನ್ ಮೊಯಿದ್ದೀನ್ ಹಾಗೂ ಜಂಟಿ ಕುಲಸಚಿವ ಅಬ್ದುಲ್ ಬಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.