ADVERTISEMENT

ಬೆಂಗಳೂರು: ಪ್ರೆಸ್‌ ಕ್ಲಬ್‌ ವಾರ್ಷಿಕ ಪ್ರಶಸ್ತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 23:20 IST
Last Updated 2 ಜನವರಿ 2025, 23:20 IST
ಎನ್‌. ಉದಯಕುಮಾರ್‌
ಎನ್‌. ಉದಯಕುಮಾರ್‌   

ಬೆಂಗಳೂರು: ಬೆಂಗಳೂರು ಪ್ರೆಸ್‌ ಕ್ಲಬ್‌ನ 2024ನೇ ಸಾಲಿನ ವರ್ಷದ ವ್ಯಕ್ತಿ, ಮೂವರಿಗೆ ವಿಶೇಷ ಪ್ರಶಸ್ತಿ, ಐವರಿಗೆ ಪ್ರೆಸ್‌ ಕ್ಲಬ್‌ ಸುವರ್ಣ ಮಹೋತ್ಸವ ಪ್ರಶಸ್ತಿ ಹಾಗೂ 50 ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

‘ಪ್ರಜಾವಾಣಿ’ಯ ಸಹಾಯಕ ಸಂಪಾದಕ ಎನ್‌. ಉದಯಕುಮಾರ್‌, ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ, ‘ಪ್ರಜಾವಾಣಿ’ಯ ಮುಖ್ಯ ವರದಿಗಾರ ರಾಜೇಶ್‌ ರೈ ಚಟ್ಲ ಅವರು ‘ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಪತ್ರಕರ್ತರಾದ ಜಾಣಗೆರೆ ವೆಂಕಟರಾಮಯ್ಯ, ಇಂದೂಧರ ಹೊನ್ನಾಪುರ, ಸುಭಾಶ್‌ ಕೆವಿನ್‌ ರೈ, ಜಿ.ಎಸ್‌. ಕೃಷ್ಣಮೂರ್ತಿ, ಡಾ. ನಾಗೇಶ್‌ ಬಸವರಾಜ್‌ ಅವರಿಗೆ ‘ಪ್ರೆಸ್‌ ಕ್ಲಬ್‌ ಸುವರ್ಣ ಮಹೋತ್ಸವ’ ಪ್ರಶಸ್ತಿ ಪ್ರಕಟವಾಗಿದೆ.

ADVERTISEMENT

ಸಾಂಬಸದಾಶಿವರೆಡ್ಡಿ, ಟಿ.ಕೆ. ತ್ಯಾಗರಾಜ್‌, ಲೋಕೇಶ್‌ ಕಾಯರ್ಗ, ಕೆ.ಎಸ್‌. ಸೋಮಶೇಖರ್, ಅಲ್ಫೋನ್ಸ್‌ ವಿ. ರಾಜ್‌, ನಾಗೇಶ್‌ ಪ್ರಭು, ಜಿ.ಆರ್‌.ಎನ್‌. ಸೋಮಶೇಖರ್‌, ಅಲ್ಫ್ರೆಡ್‌ ಟೆನ್ನಿಸನ್‌, ಎಂ.ಪಿ. ಸುಶೀಲಾ, ಕೆ.ಬಿ. ಪಂಕಜಾ, ಬಿ. ರಮೇಶ್‌ ಬಾಬು, ಟಿ. ರಾಘವನ್‌, ಶಿವರಾಮ, ವಿನೋದ್‌ಕುಮಾರ್‌ ಬಿ.ನಾಯಕ್‌, ಮನುಜಾ ವೀರಪ್ಪ, ಸಿ. ಪ್ರಕಾಶ್‌, ಶ್ರೀಕಾಂತ್‌ ಹುಣಸವಾಡಿ, ಜಗದೀಶ್‌ ಬೆಳ್ಳಿಯಪ್ಪ, ಕೆ.ಎಸ್‌. ಗಣೇಶ್‌, ಎಸ್‌. ಸತೀಶ್‌, ಸಿ.ಬಿ. ಜಯಶ್ರೀ, ಸಿದ್ದಪ್ಪ ಕಾಳೋಜಿ, ಎನ್‌. ಸಿದ್ದೇಗೌಡ, ಎಂ. ಶ್ರೀಕಾಂತ, ಯತಿರಾಜು, ಎಚ್.ಪಿ. ಪುಣ್ಯವತಿ, ಕೆ.ಎಸ್‌. ಜಗನ್ನಾಥ್‌, ಕೆ.ಎಚ್. ದೇವಿಪ್ರಸಾದ್‌ ರೈ, ದಯಾಶಂಕರ್‌ ಮೈಲಿ, ಎನ್‌.ಎ.ಎಂ. ಇಸ್ಮಾಯಿಲ್‌, ಎಸ್‌. ರಾಜು ಮಳವಳ್ಳಿ, ಕಾಂತರಾಜೇ ಅರಸ್‌, ಅನೀಸ್‌ ನಿಸಾರ್‌ ಅಹ್ಮದ್‌, ಎ. ಉಮೇಶ್‌, ಕೆಂಚೇಗೌಡ, ಸಿ.ಜಿ. ರಮೇಶ್‌, ಆರ್.ಎಚ್. ಲಕ್ಷ್ಮಿಪ್ರಸನ್ನ, ಕೆ. ಶಿವಕುಮಾರ, ಎಂ. ರಮೇಶ್‌ ಪಾಳ್ಯ, ಎಂ.ಆರ್‌. ಸುರೇಶ್‌, ಶಿವಕುಮಾರ್‌ ಮೆಣಸಿನಕಾಯಿ, ಕೆ. ಸುಂದರ, ಎಂ. ಸತೀಶ್‌ಕುಮಾರ್‌, ಜಿ.ಎಸ್‌. ಗಂಗಾಧರ್‌, ಹರಿಪ್ರಸಾದ್‌, ಶೈಲೇಂದ್ರ ಬೋಜಕ್‌, ಆರ್.ಎಚ್‌. ಜಯಪ್ರಕಾಶ್‌ ಅವರು ‘ವಾರ್ಷಿಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರನ್ನು ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ‘ವಿಶೇಷ ಪ್ರಶಸ್ತಿ’ ಪ್ರಕಟಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರೆಸ್‌ ಕ್ಲಬ್‌ ಆವರಣದಲ್ಲಿ ಜನವರಿ 12ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ ಎಂದು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಆರ್‌. ಶ್ರೀಧರ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಕುಮಾರ್‌ ಬೆಳ್ಳಿತಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಘುನಾಥ ಚ.ಹ.
ರಾಜೇಶ್‌ ರೈ ಚಟ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.