ADVERTISEMENT

ಅಂಬೇಡ್ಕರ್‌ಗೆ ಅಗೌರವ ಖಂಡಿಸಿ ‘ರಾಯಚೂರು ಚಲೋ’

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 18:24 IST
Last Updated 1 ಫೆಬ್ರುವರಿ 2022, 18:24 IST

ಬೆಂಗಳೂರು: ‘ಬಿ.ಆರ್.ಅಂಬೇಡ್ಕರ್‌ ಅವರಿಗೆ ಅವಮಾನ ಮಾಡಿದ ನ್ಯಾಯಾಧೀಶಮಲ್ಲಿಕಾರ್ಜುನ ಗೌಡ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಫೆಬ್ರುವರಿ ಮೊದಲ ವಾರದಲ್ಲಿ ‘ರಾಯಚೂರು ಚಲೋ’ ನಡೆಸಲಾಗುವುದು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಹೇಳಿದರು.

‌ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿ ಸ್ಥಾನದಲ್ಲಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರನ್ನು ಸರ್ಕಾರ ರಕ್ಷಿಸುವ ಕೆಲಸ ಮಾಡುತ್ತಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಉಪ್ಪಾರಪೇಟೆ ಠಾಣೆಗೆ ದೂರು ನೀಡಲಾಗಿದೆ. ಆದರೆ, ಈವರೆಗೆ ಎಫ್‌ಐಆರ್‌ ದಾಖಲಿಸಿಕೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾನೂನು ಮತ್ತು ಗೃಹ ಸಚಿವರಿಗೆಬುಧವಾರ (ಫೆ.2) ಘೇರಾವ್‌ ಹಾಕಲಿದ್ದೇವೆ. ಹೊಸೂರು, ಕೆ.ಆರ್.ಪುರ, ಹೆಬ್ಬಾಳ, ತುಮಕೂರು ರಸ್ತೆ ಸೇರಿದಂತೆ ಪ್ರಮುಖ ಹೆದ್ದಾರಿಗಳನ್ನುಹಂತ ಹಂತವಾಗಿ ಬಂದ್ ಮಾಡಲಿದ್ದೇವೆ. ಈ ವಾರಾಂತ್ಯದಲ್ಲಿ ಕೋಲಾರದಿಂದ ‘ರಾಯಚೂರು ಚಲೋ’ ನಡೆಸಲಿದ್ದೇವೆ. 10 ಜಿಲ್ಲೆಗಳ ಮೂಲಕ ರಾಯಚೂರು ತಲುಪಿ, ಅಲ್ಲಿ ಸಮಾವೇಶಗೊಳ್ಳಲಿದ್ದೇವೆ’ ಎಂದೂ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.