ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾ ಧೀನ ಕೈದಿ ಚಿನ್ನಸ್ವಾಮಿ (40) ಎಂಬಾತ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.
ಮೈಕೊ ಲೇಔಟ್ ಬಳಿಯ ಬಿಳೇಕಳ್ಳಿ ನಿವಾಸಿ ಆಗಿದ್ದ ಚಿನ್ನಸ್ವಾಮಿ, ಪತ್ನಿ ಉಮಾ ರಾಣಿ ಅವರನ್ನು ಕೊಲೆ ಮಾಡಿದ ಆರೋಪದಡಿ ಜೈಲು ಸೇರಿದ್ದ.
‘9ನೇ ಬ್ಯಾರಕ್‌ನಲ್ಲಿ ಚಿನ್ನಸ್ವಾಮಿಯನ್ನು ಇರಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಬ್ಯಾರಕ್‌ನ ಮೊದಲ ಮಹಡಿಯಿಂದ ಬಿದ್ದಿದ್ದ ಆತ, ತೀವ್ರ ಗಾಯಗೊಂಡಿದ್ದ. ಜೈಲು ಸಿಬ್ಬಂದಿಯೇ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಆತ ತೀರಿಕೊಂಡಿದ್ದಾನೆ’ ಎಂದು ಜೈಲು ಅಧಿಕಾರಿ ದೂರು ನೀಡಿದ್ದಾಗಿ ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.