ADVERTISEMENT

ಬೆಂಗಳೂರು | ಖಾಸಗಿ ಸಾರಿಗೆ ಮುಷ್ಕರ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2023, 5:28 IST
Last Updated 11 ಸೆಪ್ಟೆಂಬರ್ 2023, 5:28 IST
<div class="paragraphs"><p>ಖಾಸಗಿ ವಾಹನಗಳ ಬಂದ್ ಹಿನ್ನೆಲೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಆಟೋ ಹಾಗೂ ಟ್ಯಾಕ್ಸಿಗಾಗಿ ಕಾಯುತ್ತಿರುವುದು.</p></div>

ಖಾಸಗಿ ವಾಹನಗಳ ಬಂದ್ ಹಿನ್ನೆಲೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಆಟೋ ಹಾಗೂ ಟ್ಯಾಕ್ಸಿಗಾಗಿ ಕಾಯುತ್ತಿರುವುದು.

   

ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ನಡೆಸುತ್ತಿರುವ ಮುಷ್ಕರ ಶಾಂತಿಯುತವಾಗಿದೆ. ಸಾರ್ವಜನಿಕರಿಗೆ ಮುಷ್ಕರದ ಬಿಸಿ ಅಷ್ಟಾಗಿ ತಟ್ಟಿಲ್ಲ.

‘ವಂದೇ ಭಾರತ್ ರೈಲು’ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬಂದಾಗ ಅದರಿಂದ ಇಳಿದ ಪ್ರಯಾಣಿಕರಲ್ಲಿ ಕೆಲವರು ಅಟೊಗಾಗಿ ವಿಚಾರಿಸುತ್ತಿರುವುದು ಕಂಡು ಬಂತು. ಬಹುತೇಕ ಕಡೆಗಳಲ್ಲಿ ಜನರು ಸ್ವಂತ ವಾಹನ ಇಲ್ಲವೇ ಬಿಎಂಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದರಿಂದ ಸಮಸ್ಯೆಗಳಾಗಿಲ್ಲ. ಎಲ್ಲೂ ಜನ ದಟ್ಟಣೆ ಉಂಟಾಗಿಲ್ಲ.

ADVERTISEMENT

ಮುಷ್ಕರಕ್ಕೆ ಬೆಂಬಲ ನೀಡಿರುವ ವಿವಿಧ ಸಂಘಟನೆಗಳು ಅಲ್ಲಲ್ಲಿ ಪಾದಯಾತ್ರೆ ನಡೆಸಿದರು. ಬಳಿಕ ಸ್ವಾತಂತ್ರ್ಯ ಉದ್ಯಾನದ ಕಡೆಗೆ ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.