ADVERTISEMENT

ಜಿಬಿಎ ವ್ಯಾಪ್ತಿಯಲ್ಲಿ ಇಂದಿನಿಂದ ಆಸ್ತಿ ಹರಾಜು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
<div class="paragraphs"><p>ಜಿಬಿಎ </p></div>

ಜಿಬಿಎ

   

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಆಸ್ತಿಗಳಿಂದ ₹437 ಕೋಟಿ ತೆರಿಗೆ  ಬಾಕಿ ವಸೂಲಿ ಮಾಡಲು ನಗರ ಪಾಲಿಕೆಗಳು ಹರಾಜು ಪ್ರಕ್ರಿಯೆಯನ್ನು ಫೆ.21ರಿಂದ ಆರಂಭಿಸಲಿವೆ.

ನಗರ ಪಾಲಿಕೆಗಳ ಜಂಟಿ ಆಯುಕ್ತರು ಈ ಬಗ್ಗೆ ನೋಟಿಸ್‌ಗಳನ್ನು ಜಾರಿ ಮಾಡಿದ್ದು, ಆಯಾ ಜಂಟಿ ಆಯುಕ್ತರ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

ADVERTISEMENT

ಯಾವ ಪಾಲಿಕೆಯಲ್ಲಿ ಎಷ್ಟು ಆಸ್ತಿ ತೆರಿಗೆ ಬಾಕಿ?

ನಗರ ಪಾಲಿಕೆ;ಆಸ್ತಿಗಳು;ಒಟ್ಟು ಬಾಕಿ

ಪೂರ್ವ;1,615; ₹119.90 ಕೋಟಿ

ಪಶ್ಚಿಮ;1,504; ₹84.23 ಕೋಟಿ

ಕೇಂದ್ರ;1,398; ₹81.26 ಕೋಟಿ

ಉತ್ತರ;1,156; ₹79.83 ಕೋಟಿ

ದಕ್ಷಿಣ;1,347; ₹72.30 ಕೋಟಿ

ಒಟ್ಟು;7,020; ₹437.55 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.