ADVERTISEMENT

ಖಾಸಗಿ ಕಂಪನಿಗಳಿಗೆ ಅನುಮತಿ : ಪ್ರತಿಭಟನೆ ಇಂದು

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:16 IST
Last Updated 19 ಆಗಸ್ಟ್ 2019, 20:16 IST
   

ಬೆಂಗಳೂರು: ಬೆಳ್ಳಂದೂರು ಮತ್ತು ಹೊರ ವರ್ತುಲ ರಸ್ತೆ ಸುತ್ತಮುತ್ತ ಖಾಸಗಿ ಕಂಪನಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡುತ್ತಿರುವುದನ್ನು ವಿರೋಧಿಸಿ ಮಂಗಳವಾರ ಪ್ರತಿಭಟನೆ ನಡೆಸಲಿದ್ದಾರೆ.

‘ತೀವ್ರ ಜನದಟ್ಟಣೆ ಇರುವ ಈ ಪ್ರದೇಶಕ್ಕೆ ಮೆಟ್ರೊ ಮಾರ್ಗವಿಲ್ಲ. ಎಲಿವೇಟೆಡ್ ಕಾರಿಡಾರ್ ಯೋಜನೆ ಸ್ಥಗಿತಗೊಂಡಿದೆ. ಬಸ್ ಸೌಕರ್ಯ ಸಮರ್ಪಕವಾಗಿಲ್ಲ, ಉಪನಗರ ರೈಲು ಯೋಜನೆ ಸಂಪರ್ಕವಿಲ್ಲ. ಆದರೂ, ಹಲವು ಕಂಪನಿಗಳಿಗೆ ಅನುಮತಿ ನೀಡಲಾಗುತ್ತಿದೆ. ಒಂದು ಕಂಪನಿ ತಲೆ ಎತ್ತಿದರೆ ಕನಿಷ್ಠ 5 ಸಾವಿರ ಜನ ಈ ಭಾಗದಲ್ಲಿ ಸಂಚರಿಸಲಿದ್ದಾರೆ’ ಎಂದು ನಿವಾಸಿ ಶಾಲಿನಿ ಸುಶೀಲಾ ಹೇಳಿದರು.

ಸಾರಿಗೆ ಸಂಪರ್ಕ ಹೆಚ್ಚಿಸದೆ ಕಂಪನಿಗಳಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಆರ್‌ಎಂಜಡ್ ಇಕೋವರ್ಲ್ಡ್‌ ಬಳಿಯಿಂದ ರಿಂಗ್ ರಸ್ತೆಯ ಬೆಳ್ಳಂದೂರು ಜಂಕ್ಷನ್ ತನಕ ಮಾನವ ಸರಪಳಿ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.