ADVERTISEMENT

ಪ್ರಧಾನಿ ವಿರುದ್ಧ ಪ್ರಚೋದನಕಾರಿ ಹೇಳಿಕೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 13 ಮೇ 2025, 15:46 IST
Last Updated 13 ಮೇ 2025, 15:46 IST
ನವಾಜ್‌ 
ನವಾಜ್‌    

ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಮನೆಯ ಮೇಲೆ ಮೊದಲು ಬಾಂಬ್‌ ದಾಳಿ ನಡೆಸಬೇಕು’ ಎಂಬುದಾಗಿ ಹೇಳಿಕೆ ನೀಡಿ ಆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿದ್ದ ಹಾಕಿದ್ದ ಯುವಕನನ್ನು ಅಗ್ನೇಯ ವಿಭಾಗದ ಬಂಡೇಪಾಳ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ವಿಡಿಯೊದಲ್ಲಿ ಏನಿತ್ತು?:

ADVERTISEMENT

‘ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮನೆಯ ಮೇಲೆ ಪಾಕಿಸ್ತಾನ ಇನ್ನೂ ಏಕೆ ಬಾಂಬ್ ಹಾಕಿಲ್ಲ? ಜನರೆಲ್ಲ ಸುಮ್ಮನೆ ನೆಮ್ಮದಿಯಿಂದ ಇರುವಾಗ ಈ ಪರಿಸ್ಥಿತಿ ಸೃಷ್ಟಿಸಿದ್ದು, ಮೋದಿ. ಮೊದಲು ನರೇಂದ್ರ ಮೋದಿ ಅವರ ಮನೆಯ ಮೇಲೆ ಬಾಂಬ್ ಹಾಕಬೇಕು’ ಎಂದು ನವಾಜ್‌ ವಿಡಿಯೊದಲ್ಲಿ ಹೇಳಿದ್ದ.

ಆ ವಿಡಿಯೊವನ್ನು ‘ಪಬ್ಲಿಕ್‌ ಸರ್ವೆಂಟ್’ ಎಂಬ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ. ಬಂಡೇಪಾಳ್ಯ ಪೊಲೀಸ್‌ ಠಾಣೆಯ ಸಾಮಾಜಿಕ ಮಾಧ್ಯಮಗಳ ನಿಗಾ ವಿಭಾಗದ ಪೊಲೀಸರು ಆ ವಿಡಿಯೊ ಗಮನಿಸಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.