ADVERTISEMENT

ರಾಜಭವನ ವೀಕ್ಷಣೆಗೆ ಜ.27ರಂದು ಸಾರ್ವಜನಿಕ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2025, 15:59 IST
Last Updated 26 ಜನವರಿ 2025, 15:59 IST
ರಾಜಭವನ-ಸಂಗ್ರಹ ಚಿತ್ರ
ರಾಜಭವನ-ಸಂಗ್ರಹ ಚಿತ್ರ   

ಬೆಂಗಳೂರು: 76ನೇ ಗಣರಾಜ್ಯೋತ್ಸವದ ನಿಮಿತ್ತ ಸೋಮವಾರ(ಜ.27) ಸಾರ್ವಜನಿಕರಿಗೆ ರಾಜಭವನ ವೀಕ್ಷಣೆಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ.

ಸಂಜೆ 6 ಗಂಟೆಯಿಂದ 7.30ವರೆಗೆ ರಾಜಭವನವನ್ನು ವೀಕ್ಷಿಸಬಹುದು. ಸಾರ್ವಜನಿಕರು ಮುಖ್ಯ ದ್ವಾರದ ಮೂಲಕ ಉಚಿತ ಪ್ರವೇಶ ಪಡೆಯಬಹುದಾಗಿದೆ.

ರಾಜಭವನ ಪ್ರವೇಶ ಪಡೆಯಲು ಇಚ್ಛಿಸುವವರು ಪ್ರವೇಶದ ವೇಳೆ ಆಧಾರ್ ಕಾರ್ಡ್ ಅಥವಾ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು.

ADVERTISEMENT

ಸಾರ್ವಜನಿಕರು ಯಾವುದೇ ರೀತಿಯ ಕ್ಯಾಮೆರಾ, ಕೈ ಚೀಲ, ಚೂಪಾದ ವಸ್ತುಗಳು, ತಿಂಡಿ-ತಿನಿಸು, ಪ್ಲಾಸ್ಟಿಕ್ ವಸ್ತುಗಳು ಸೇರಿದಂತೆ ಯಾವುದೇ ಲಗೇಜ್ ಚೀಲವನ್ನು ತರುವಂತಿಲ್ಲ. ಹಾಗೆಯೇ, ರಾಜಭವನದ ಒಳಗಡೆ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.

ಸಾರ್ವಜನಿಕರು ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಿ, ಸಹಕರಿಸಬೇಕು ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್.ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.