ADVERTISEMENT

ಶಾಸಕರ ಖರೀದಿ: ರಾಜ್ಯಪಾಲರ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 19:36 IST
Last Updated 19 ಜುಲೈ 2019, 19:36 IST
   

ಬೆಂಗಳೂರು: ‘ಶಾಸಕರ ಖರೀದಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ’ ಎಂದುರಾಜ್ಯಪಾಲ ವಜುಭಾಯಿ ವಾಲಾ ಆರೋಪಿಸಿದ್ದಾರೆ.

ಶುಕ್ರವಾರವೇ ವಿಶ್ವಾಸಮತ ನಿರ್ಣಯ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೂಚಿಸಿ ಬರೆದ ಪತ್ರದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಆಡಳಿತದಲ್ಲಿ ಏಕೆ ಮಧ್ಯೆ ಪ್ರವೇಶಿಸಬೇಕಾಯಿತು ಎಂಬ ವಿವರಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ.

‘ಶಾಸಕರ ಖರೀದಿ ಕಾರಣಕ್ಕಾಗಿಯೇ ವಿಶ್ವಾಸಮತ ನಿರ್ಣಯ ಪ್ರಕ್ರಿಯೆ ಪೂರ್ಣಗೊಳಿಸಲು ತಡಮಾಡುತ್ತಿದ್ದೀರಿ. ಅದಕ್ಕಾಗಿ ನಿಧಾನ ಮಾಡದೆ ಮಧ್ಯಾಹ್ನ 1.30ರ ಒಳಗೆ ವಿಶ್ವಾಸ ಸಾಭೀತುಪಡಿಸುವಂತೆ ಕೇಳಿದ್ದು. ಈಗಲೂಹೆಚ್ಚು ತಡಮಾಡಬಾರದು. ಹೆಚ್ಚಿನ ಸಂಖ್ಯೆಯ ಸದಸ್ಯರು ಮಾತನಾಡಲು ಬಯಸಿದರೆ ಅವಕಾಶ ನೀಡಬೇಕು. ಇಂದೇ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.